ಕುಂಬಳೆ: ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲಾ ಭಂಡಾರಿ ಸಮಾಜ ಸೇವಾ ಸಂಘ ಸೂರಂಬೈಲು ಇದರ ವಾರ್ಷಿಕ ಸಮ್ಮೇಳನ ಇತ್ತೀಚೆಗೆ ಸೂರಂಬೈಲು ಶ್ರೀ ಗಣೇಶ ಸಭಾ ಭವನದಲ್ಲಿ ನಡೆಯಿತು. ಆನಂದ ಭಂಡಾರಿ ಸೂರಂಬೈಲು ಧ್ವಜಾರೋಹಣಗೈದರು. ಸಂಘದ ಅಧ್ಯಕ್ಷ ವಸಂತ ಕುಮಾರ್ ಸಿ.ಕೆ. ಅಧ್ಯಕ್ಷತೆ ವಹಿಸಿದ್ದರು.
ರಾಘವ ಭಂಡಾರಿ ಅಣೆಬೈಲು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಪಂಚಾಯಿತಿ ಸದಸ್ಯೆ ಅನಿತಾ, ಹಿರಿಯರಾದ ಕೆ.ಪಿ.ಭಂಡಾರಿ ನಾಯ್ಕಾಪು, ಕುಂಟಾರು ಗೋಪಾಲ ಭಂಡಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಕುಂಬಳೆ ಸಂಜೀವ ಭಂಡಾರಿ ಸ್ವಾಗತಿಸಿ, ಸುಧಾಕರ ಮಾಯಿಪ್ಪಾಡಿ ವಂದಿಸಿದರು. ಬಳಿಕ ನಡೆದ ಪ್ರತಿನಿ ಸಭೆಯಲ್ಲಿ ಕಾರ್ಯದರ್ಶಿ ಉದನೇಶ್ವರ ಬದಿಯಡ್ಕ ವಾರ್ಷಿಕ ವರದಿ, ಕೋಶಾಧಿಕಾರಿ ಸತ್ಯನಾರಾಯಣ ಬಿ ಲೆಕ್ಕಪತ್ರ ಹಾಗೂ ಯತೀಶ ಮಂಗಳೂರು ಠರಾವುಗಳನ್ನು ಮಂಡಿಸಿದರು. ಆರ್.ಕೆ. ಬದಿಯಡ್ಕ, ಹೇಮಲತಾ, ವಿಶ್ವನಾಥ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ವಿನೋದ್ ಕುಂಟಾರು ಸ್ವಾಗತಿಸಿ ರಾಜೇಶ ಎಂ ವಂದಿಸಿದರು.