ಮುಳ್ಳೇರಿಯ: ಮುಳ್ಳೇರಿಯ ಮಂಡಲ ಸಭೆ ಕಾಸರಗೋಡು ವಲಯ ಅಧ್ಯಕ್ಷ ಮಹಾಲಿಂಗೇಶ್ವರ ಭಟ್ಟರ ನಿವಾಸದಲ್ಲಿ ಜರಗಿತು. ಧ್ವಜಾರೋಹಣ ಶಂಖನಾದ ಗುರುವಂದನೆ ಗೋವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು. ಸ್ವಾಗತದ ನಂತರ ಶ್ರೀ ಗಣೇಶ ಪಂಚ ರತ್ನ ಸ್ತೋತ್ರ ಪಠಣ ನಡೆಯಿತು.
ಕೋಶಾಧ್ಯಕ್ಷರು ಲೆಕ್ಕಪತ್ರ ಮಂಡಿಸಿದರು. ಮಾಣಿಮಠದ ಶಿಲಾಮಯ ಗರ್ಭಗುಡಿ, ರಚನೆಯ ಆಯವ್ಯಯವನ್ನು ಸಭೆಯ ಮುಂದಿಡಲಾಯಿತು. ಸುಳ್ಯ ವಲಯ ಕೋಶಾಧ್ಯಕ್ಷ ಈಶ್ವರ ಭಟ್ಟ ಇವರ ಪುತ್ರಿ ಅಶ್ವಿನಿ ಅವರು ದಕ್ಷಿಣ ಕೊರಿಯಾದಲ್ಲಿ ನಡೆಯುವ ಸ್ಕೌಟ್ ಗೈಡ್ ಅಂತಾರಾಷ್ಟ್ರೀಯ ಜಾಂಬೂರಿಗೆ ತೆರಳಲು ಶುಭಾಶಯ ಕೋರಲಾಯಿತು. ಮಹಾಮಂಡಲ ನೂತನ ಪದಾಧಿಕಾರಿಗಳ ಹೆಸರು ಪ್ರಕಟಗೊಂಡಿದ್ದು ಮುಳ್ಳೇರಿಯ ಮಂಡಲದ ಅಧ್ಯಕ್ಷ ಬಾಲಸುಬ್ರಮಣ್ಯ ಭಟ್ ಸರ್ಪಮಲೆ ಅವರು ಮಹಾಮಂಡಲದ ಉಪಾಧ್ಯಕ್ಷರಾಗಿ ನಿಯೋಜನೆಗೊಂಡಿದ್ದು, ಕೇಶವಪ್ರಕಾಶ ಮುಣ್ಚಿಕ್ಕಾನ ಇವರು ಯುವ ವಿಭಾಗದ ಜವಾಬ್ದಾರಿಯನ್ನು ನಿರ್ವಹಿಸಲಿದ್ದು ಅಭಿನಂದನೆ ಸಲ್ಲಿಸಲಾಯಿತು.
ಆಶೋಕೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಸಂಘಟನಾ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳುವ ವಿಚಾರವನ್ನು ಪ್ರಸ್ತಾಪಿಸಿ ಆಮಂತ್ರಣ ಪತ್ರಿಕೆ ಮತ್ತು ಸೇವಾ ವಿವರಗಳನ್ನು ತಿಳಿಸಲಾಯಿತು. ಪ್ರತಿವರ್ಷದಂತೆ ಮೂರು ದಿನಗಳಲ್ಲಿ ನಾಲ್ಕು ವಲಯಗಳಿಂದ ಭಿಕ್ಷಾ ಸೇವೆ, ಪಾದ ಪೂಜೆ, ಮಲ್ಲಿಕಾರ್ಜುನ ಪೂಜೆ ನಡೆಸಲು ತಿಳಿಸಲಾಯಿತು.
ಶ್ರೀಮಠದ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕೊಲ್ಲಂಪಾರೆ ಡಾ. ಪುರುಷೋತ್ತಮ ಭಟ್ಟ ದಂಪತಿಗಳು, ಡಾ. ಗಣಪತಿ ಭಟ್ಟ ಕುಳಮರ್ವ ಮತ್ತು ಹಿರಿಯ ಗುರಿಕ್ಕಾರ ಶಂಕರನಾರಾಯಣ ಭಟ್ ತೆಕ್ಕೇಕೆರೆ ಇವರನ್ನು ಶಾಲು ಹೊದಿಸಿ ಫಲ ಫಲಕ ನೀಡಿ ಗೌರವಿಸಲಾಯಿತು. ಮಾಸದ ಮಾತೆಯರಾಗಿ ವೈಯಕ್ತಿಕವಾಗಿ ದೇಣಿಗೆ ನೀಡಿದ ಡಾ.ಪದ್ಮಾವತಿ ಪುರುμÉೂೀತ್ತಮ ಭಟ್ ಇವರನ್ನೂ ಗೌರವಿಸಲಾಯಿತು.
ಮಹಾಮಂಡಲದ ಅಧ್ಯಕ್ಷ ಆರ್.ಎಸ್. ಹೆಗಡೆ ಅವರು ಶ್ರೀ ಗುರುಗಳ ಚಾತುರ್ಮಾಸದ ಪೂರ್ಣ ವಿವರಗಳನ್ನು ನೀಡಿದರು. ಹಲವಾರು ವರ್ಷಗಳಿಂದ ಶ್ರೀಮಠದ ಜವಾಬ್ದಾರಿಯನ್ನು ನಿರ್ವಹಿಸಿದ್ದು ತಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ ಎಂದ ಅವರು ಶ್ರೀ ಗುರುಗಳ ಸಂಕಲ್ಪವನ್ನು ಸಾಕಾರಗೊಳಿಸಲು ಕರೆನೀಡಿದರು.
ಮಹಾಮಂಡಲದ ನಿಯೋಜಿತಾಧ್ಯಕ್ಷ ಮೋಹನ್ ಭಾಸ್ಕರ್ ಹೆಗಡೆಯವರು ಸ್ಫೂರ್ತಿದಾಯಕ ಮಾತುಗಳನ್ನಾಡಿ ಮುಂದಿನ ಅವಧಿಯಲ್ಲಿ ಸಂಘಟಿತರಾಗಿ ಶ್ರೀ ಗುರುಗಳ ಮಾರ್ಗದರ್ಶನಂತೆ ಕಾರ್ಯನಿರ್ವಹಿಸುವ ಎಂದರು. ನಾಗರಾಜ ಭಟ್ಟ ಪೆದಮಲೆ ಮತ್ತು ನಿಯೋಜಿತ ಕಾರ್ಯದರ್ಶಿ, ಉದಯಕುಮಾರ್ ಮಿತ್ತೂರು ಸಂದರ್ಭೋಚಿತ ಮಾಹಿತಿ ನೀಡಿದರು. ಕುಂಬಳೆ ಸೀಮೆ ಕುಂಟಿಕಾನ ಮಠದ ಜೀರ್ಣೋದ್ಧಾರ ಸಮಿತಿ ಸದಸ್ಯರು ಶ್ರೀ ಗುರುಗಳನ್ನು ಭೇಟಿ ಮಾಡಿದ ವಿಚಾರವನ್ನು ಪ್ರಸ್ತಾಪಿಸಲಾಯಿತು ಮತ್ತು ಕುಂಟಿಕಾನ ಮಠದಲ್ಲಿ ಜಿರ್ಣೋದ್ದಾರ ಸಮಿತಿ ಮತ್ತು ಅಭಿವೃದ್ಧಿ ಟ್ರಸ್ಟ್ ಸಭೆ ನಡೆಸುವುದು ಎಂದು ತೀರ್ಮಾನಿಸಲಾಗಿದ್ದು ಶ್ರೀಮಠಕ್ಕೆ ಸಂಬಂಧಪಟ್ಟವರು ಈ ಸಭೆಯಲ್ಲಿ ಭಾಗವಹಿಸಲು ತಿಳಿಸಲಾಯಿತು. ಶ್ರೀರಾಮ ತಾರಕ ಮಂತ್ರ ಜಪ, ಶಾಂತಿ ಮಂತ್ರ, ಶಂಖನಾದ ಧ್ವಜಾವತರಣದೊಂದಿಗೆ ಸಭೆ ಸಮಾಪ್ತಿಗೊಂಡಿತು.