ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ. ಯು.ಪಿ ಶಾಲಾ 2023-24ನೇ ಶೈಕ್ಷಣಿಕ ವರ್ಷದ ಶಾಲಾ ನಾಯಕ/ನಾಯಕಿಯ ಆಯ್ಕೆ ಹಾಗೂ ಪಾರ್ಲಿಮೆಂಟ್ ರೂಪಿಕರಣ ಯಂ.ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು. 7 ಅಭ್ಯರ್ಥಿಗಳು ಮುಖ್ಯ ಚುನಾವಣಾಧಿಕಾರಿಯಾದ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಇವರಿಗೆ ನಾಮಪತ್ರ ಸಲ್ಲಿಸಿದರು. ಜುಲೈ 14 ರಂದು ವಿದ್ಯಾರ್ಥಿಗಳು ಮುದ್ರೆ ಒತ್ತಿದ ಕಾಗದವನ್ನು ಮತ ಪೆಟ್ಟಿಗೆಗೆ ಹಾಕುವುದರ ಮೂಲಕ ಮತದಾನ ಗೈದರು. ಒಟ್ಟು 480 ವಿದ್ಯಾರ್ಥಿಗಳು ಮತ ಚಲಾಯಿಸಿದರು. 7 ನೇ ತರಗತಿಯ ಆಯಿಷತ್ ಫಾಯಿಝ ಶಾಲಾ ನಾಯಕಿಯಾಗಿ ಹಾಗೂ 7 ತರಗತಿಯ ಮೊಹಮ್ಮದ್ ಅಯಾದ್ ಉಪನಾಯಕನಾಗಿ ಆಯ್ಕೆಗೊಂಡರು. ಶಾಲಾ ದೈಹಿಕ ಶಿಕ್ಷಕ ಎಸ್. ಎಸ್.ಪ್ರಸಾದ್ ಹಾಗೂ ಶಾಲಾ ಸಮಾಜ ವಿಜ್ಞಾನ ಕ್ಲಬ್ ನ ಸಂಚಾಲಕ ವಿಘ್ನೇಶ್ ಎಸ್ ಚುನಾವಣೆಯ ನೇತೃತ್ವ ವಹಿಸಿದ್ದರು.