ಕಾಸರಗೋಡು: ರಾಜ್ಯ ಸರ್ಕಾರದ ಮಾನ್ಯತೆ ಪಡೆದ ಸಾರ್ವಜನಿಕ ಸೇವಾ ಕೇಂದ್ರಗಳಾಗಿರುವ ಅಕ್ಷಯ ಕೇಂದ್ರಗಳ ಮೂಲಕ ಲಭ್ಯವಿರುವ ಸೇವೆಗಳಿಗೆ, ಸರ್ಕಾರ ನಿಗದಿಪಡಿಸಿದ ಸೇವಾ ದರವನ್ನು ಮಾತ್ರ ಪಾವತಿಸಬೇಕು. ಸರ್ಕಾರವು ಅನುಮೋದಿಸಿದ ಸೇವಾ ಶುಲ್ಕಗಳನ್ನು ಎಲ್ಲಾ ಅಕ್ಷಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಪ್ರದರ್ಶಿಸಲು,ಒದಗಿಸಿದ ಸೇವೆಗಳ ಶುಲ್ಕದ ಬಗ್ಗೆ ಎಲ್ಲಾ ಬಳಕೆದಾರರಿಗೆ ಕಡ್ಡಾಯವಾಗಿ ರಶೀದಿ ನೀಡುವಂತೆಯೂ ಅಕ್ಷಯ ಕೇಂದ್ರಗಳಿಗೆ ಸೂಚಿಸಲಾಗಿದೆ.
ಯಾವುದೇ ಅಕ್ಷಯ ಕೇಂದ್ರದಲ್ಲಿ ಸೇವಾ ಶುಲ್ಕವನ್ನು ಪ್ರದರ್ಶಿಸದಿದ್ದರೆ ಅಥವಾ ರಸೀದಿ ಲಭ್ಯವಿಲ್ಲದಿದ್ದರೆ, ಸಾರ್ವಜನಿಕರು ರಾಜ್ಯ ಸರ್ಕಾರದ ಜಿಲ್ಲಾ ಕಚೇರಿ ಅಥವಾ ನಾಗರಿಕ ಕರೆ ಕೇಂದ್ರಕ್ಕೆ ಮಾಹಿತಿ ನೀಡಬಹುದಾಗಿದೆ. ಅಕ್ಷಯ ಕೇಂದ್ರಗಳಲ್ಲಿ ಸೇವೆಗಳ ಬಗ್ಗೆ ದೂರುಗಳಿದ್ದಲ್ಲಿ ಇದನ್ನು ಜಿಲ್ಲಾ ಕಚೇರಿ ಅಥವಾ ರಾಜ್ಯ ಕಚೇರಿಯಲ್ಲಿ ನೀಡಬಹುದು. ನಾಗರಿಕ ಕರೆ ಕೇಂದ್ರ (155300) ಅಥವಾ ಜಿಲ್ಲಾ ಕಛೇರಿಯ ಸಂಖ್ಯೆ(04994 227170)ಗಳಿಗೆ ಕರೆಮಾಡಬಹುದಾಗಿದೆ.
ಸೇವೆಗಳಿಗೆ ಹೆಚ್ಚಿನ ಶುಲ್ಕ ವಿಧಿಸುವ ಸಂದರ್ಭದಲ್ಲಿ, ರಶೀದಿ ಇಲ್ಲದಿರುವುದು ಅಥವಾ ದುರ್ನಡತೆ ಚಿಜಠಿoಞsಜ.ಚಿಞshಚಿಥಿಚಿ@ಞeಡಿಚಿಟಚಿ.gov.iಟಿ ಗೆ ಕರೆ ಮಾಡಿ ಅಥವಾ ಮೇಲ್ ಮಾಡಿ. ಅಕ್ಷಯ ಕೇಂದ್ರಗಳ ಕಾರ್ಯಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಭಾಗವಾಗಿ ಸೇವೆಗಳು ಮತ್ತು ಸೇವಾ ಶುಲ್ಕಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕ್ರಮಗಳ ಭಾಗವಾಗಿದೆ ಎಂದು ಅಕ್ಷಯ ಮುಖ್ಯ ಸಂಯೋಜಕರು ಮಾಹಿತಿ ನೀಡಿದರು. ಕೆಲವೊಂದು ಅಕ್ಷಯ ಕೇಂದ್ರಗಳಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ದರ ವಸೂಲಿಮಾಡುವ ಮೂಲಕ ಗ್ರಾಹಕರನ್ನು ಶೋಷಿಸುವ ಹಾಗೂ ಈ ಬಗ್ಗೆ ಪ್ರಶ್ನಿಸಿದರೆ, ದರ್ಪದಿಂದ ಉತ್ತರಿಸುವ ಸಿಬ್ಬಂದಿ ಬಗ್ಗೆ ವ್ಯಾಪಕ ದೂರಲಾಗಿತ್ತು.