ಮಂಜೇಶ್ವರ: ಬಿಜೆಪಿ ವರ್ಕಾಡಿ ಪಂಚಾಯತಿ ಅಧ್ಯಕ್ಷರಾಗಿ ಪಕ್ಷದ ಹಿರಿಯ ನೇತಾರ ದೂಮಪ್ಪ ಶೆಟ್ಟಿ ತಾಮಾರ್, ಹಾಗೂ ಪ್ರ.ಕಾರ್ಯದರ್ಶಿಯಾಗಿ ಭಾಸ್ಕರ ಪೊಯ್ಯೆ ಅವರನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿಎಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.
ವರ್ಕಾಡಿಯಲ್ಲಿ ಜರಗಿದ ಪಂಚಾಯತಿ ಕೋರ್ ಸಮಿತಿ ಸಭೆಯಲ್ಲಿ ನೇಮಕ ಮಾಡಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮಂಡಲ ಅಧ್ಯಕ್ಷ ಆದರ್ಶ್ ಬಿಎಂ, ಮುಖಂಡರಾದ ಚಂದ್ರಶೇಖರ್ ಶೆಟ್ಟಿ, ಎ.ಕೆ. ಕಯ್ಯಾರ್, ಅಶ್ವಿನಿ ಎಂ.ಎಲ್. ಪಜ್ವ, ತುಳಸಿ ಕುಮಾರಿ, ರಾಜ್ ಕುಮಾರ್ ಅರಿಬೈಲು, ಆನಂದ ತಚ್ಚಿರೆ, ರಕ್ಷಣ್ ಅಡಕಳ, ರವಿರಾಜ್ ವರ್ಕಾಡಿ, ಸುಬ್ರಮಣ್ಯ ಭಟ್ ಆಟಿಕುಕ್ಕೆ, ನಾಗೇಶ್ ಬಳ್ಳೂರು ಉಪಸ್ಥಿತರಿದ್ದರು.