ತ್ರಿಶೂರ್: ವೇತನ ವಿತರಣೆ ಮತ್ತೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಚಾಲಕರೋರ್ವರು ಗಮನ ಸೆಳೆದ ಪ್ರತಿಭಟನೆ ಚರ್ಚೆಗೊಳಗಾಗಿದೆ. ತ್ರಿಶೂರ್ ಚಾಲಕುಡಿ ಡಿಪೆÇೀದಲ್ಲಿ ಈ ಘಟನೆ ನಡೆದಿದೆ.
ಸಂಬಳ ಇಲ್ಲದ ಕಾರಣ ಕೂಲಿ ಕೆಲಸಕ್ಕೆ ಹೋಗಬೇಕು ಎಂದು ರಜೆ ಪತ್ರ ನೀಡಿ ಚಾಲಕರೋರ್ವರು ಪ್ರತಿಭಟನೆ ನಡೆಸಿದರು. ಡಿಪೆÇೀದ ಚಾಲಕ ಅಜು ಸಂಬಳ ಸಿಗದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದರು. ಘಟನೆ ತಡವಾಗಿದ್ದರಿಂದ ಪ್ರತಿಭಟನೆ ನಡೆಸಿ ರಜೆ ವಾಪಸ್ ಪಡೆದಿರುವುದಾಗಿ ಅಜು ತಿಳಿಸಿದ್ದಾರೆ.
ಚಾಲಕನ ಪತ್ರ ಇಲ್ಲಿದೆ:
ಸಂಬಳ ಲಭಿಸದ ಕಾರಣ ಡ್ಯೂಟಿಗೆ ಬರಲು ಕಾರಿನಲ್ಲಿ ಪೆಟ್ರೋಲ್ ಇಲ್ಲ ಸಾರ್. ಪೆಟ್ರೋಲ್ ತುಂಬಿಸಲು ಕೈಯಲ್ಲಿ ಹಣವಿಲ್ಲ. ಆದ್ದರಿಂದ ಬುಧವಾರ, ಗುರುವಾರ ಮತ್ತು ಶುಕ್ರವಾರ ಕೂಲಿ ಕೆಲಸಕ್ಕೆ ತೆರಳುತ್ತಿದ್ದು, ಅದಕ್ಕಾಗಿ ಮೇಲ್ಕಂಡ ದಿನಗಳಲ್ಲಿ ರಜೆ ಮಂಜೂರು ಮಾಡಬೇಕು ಎಂಬುದು ಚಾಲಕರ ಮನವಿಯಾಗಿದೆ.
ಕಳೆದ ವರ್ಷವೂ ಇದೇ ರೀತಿ ಜುಲೈ ಮತ್ತು ಆಗಸ್ಟ್ ತಿಂಗಳ ವೇತನ ವಿಳಂಬವಾಗಿತ್ತು. ಎರಡು ತಿಂಗಳ ಪಿಂಚಣಿಯನ್ನೂ ನೀಡಬೇಕು. ಪ್ರಸ್ತುತ ಕೆಎಸ್‍ಆರ್‍ಟಿಸಿ ಮತ್ತು ಹಣಕಾಸು ಮತ್ತು ಸಹಕಾರ ಇಲಾಖೆಗಳ ನಡುವಿನ ಒಪ್ಪಂದದಂತೆ ಪಿಂಚಣಿ ನೀಡಲಾಗುತ್ತಿದೆ. ಜೂನ್‍ನಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ಈ ವಿಳಂಬದಿಂದ ಪಿಂಚಣಿಯೂ ವಿಳಂಬವಾಗುತ್ತಿದೆ.