ಪೆರ್ಲ: ಸ್ವರ್ಗ ಮಲೆತ್ತಡ್ಕ ಪಡ್ರೆ ಶ್ರೀ ಜಟಾಧಾರಿ ಮೂಲಸ್ಥಾನದಲ್ಲಿ ತಿಂಗಳ ತಂಬಿಲ-ಹರಕೆ ತಂಬಿಲ ಮತ್ತು ದುರ್ಗಾ ಪೂಜೆ ಜುಲೈ 17ರಂದು ನಡೆಯಲಿವೆ. ಮಧ್ಯಾಃನ3ಕ್ಕೆ ದುರ್ಗಾ ಪೂಜೆ , ಸಂಜೆ 6ಕ್ಕೆ ಮಾಸಿಕ ತಂಬಿಲ ಸೇವೆ, ಹರಿಕೆ ತಂಬಲ, ದುರ್ಗಾ ಪೂಜೆ ಮಂಗಳಾರತಿ, ಪ್ರಾರ್ಥನೆ
ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 2.30ರಿಂದ ಕೋಟೆ ರಾಮ ಭಟ್, ಕಾರ್ಕಳ ಮಾರ್ಗದರ್ಶನದಲ್ಲಿ ಅವರ ಶಿಷ್ಯೆ ವೃಂದದಿಂದ'ವಾಲಿ ಮೋಕ್ಷ'ಯಕ್ಷ ಗಾನ ತಾಳಮದ್ದಳೆ, ಸಂಜೆ 6ರಿಂದ ಮಂಜಳಗಿರಿ ವೆಂಕಟ್ರಮಣ ಭಟ್ಟರ ನೇತೃತ್ವದಲ್ಲಿ ಶಿಷ್ಯರಿಂದ ವೇದ ಪಾರಾಯಣ ನಡೆಯಲಿರುವುದು.