ಪತ್ತನಂತಿಟ್ಟ: ಕರ್ಕಾಟಕಮಾಸದ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ತೆರೆಯಲಾಗಿದೆ. ನಿನ್ನೆ ಸಂಜೆ 5 ಗಂಟೆಗೆ ತಂತ್ರಿ ಕಂಠಾರರ್ ರಾಜೀವ್ ಅವರ ಸಮ್ಮುಖದಲ್ಲಿ ಮೇಲ್ಶಾಂತಿ ಕೆ.ಜಯರಾಮನ್ ನಂಬೂದಿರಿ ಅವರು ದೀಪ ಬೆಳಗಿಸಿದರು.
ನಂತರ ಅಯ್ಯಪ್ಪ ಸನ್ನಿಧಿಯ 18ನೇ ಮೆಟ್ಟಿಲು ಮುಂಭಾಗದ ಬೃಹತ್ ಕುಂಡದಲ್ಲಿ ಅಗ್ನಿಸ್ಪರ್ಶ ಮಾಡಿ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಟ್ಟರು. ನಿನ್ನೆ ಪೂಜೆಗಳು ಇರಲಿಲ್ಲ. ಇಂದು ಬೆಳಗ್ಗೆ 5.30ಕ್ಕೆ ನಿತ್ಯ ಪೂಜೆಗಳು ಆರಂಭಗೊಂಡವು. ದೇವಾಲಯ ತೆರೆದಿರುವ ದಿನಗಳಲ್ಲಿ ಉದಯಾಸ್ತಮಯ ಪೂಜೆ, ಪಡಿಪೂಜೆ, ಕಲಭಾಭಿಷೇಕ, ಪುμÁ್ಪಭಿಷೇಕದಂತಹ ವಿಶೇಷ ನೈವೇದ್ಯಗಳು ನಡೆಯಲಿವೆ.
ಬೆಳಗ್ಗೆ 5.30ರಿಂದ 10ರವರೆಗೆ ಅಭಿಷೇಕ ನಡೆಯುತ್ತದೆ . 21 ರಂದು ರಾತ್ರಿ 10 ಗಂಟೆಗೆ ಪೂಜೆಗಳು ಮುಗಿದು ಸಮಾರಂಭ ಮುಕ್ತಾಯವಾಗಲಿದೆ. ಯಾತ್ರಾರ್ಥಿಗಳು ದರ್ಶನಕ್ಕಾಗಿ ವರ್ಚುವಲ್ ಕ್ಯೂ ಕಾಯ್ದಿರಿಸಬೇಕು. ನಿಲಕ್ಕಲ್ ಮತ್ತು ಪಂಬಾದಲ್ಲಿ ಸ್ಪಾಟ್ ಬುಕಿಂಗ್ ಲಭ್ಯವಿದೆ.