ತಿರುವನಂತಪುರಂ: ಕೇರಳಕ್ಕೆ ಆಗಮಿಸುವ ವಿಮಾನಗಳಲ್ಲಿ ಪ್ರಯಾಣ ದರ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ತುರ್ತು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಕಳುಹಿಸಿದ್ದಾರೆ.
ಓಣಂ ಸೀಸನ್ ಎಂದರೆ ಅನಿವಾಸಿಗಳು ಕೇರಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಮಯ. ಈ ಹೆಚ್ಚಳವು ಅನಿವಾಸಿಗಳು ಮತ್ತು ಇತರ ರಾಜ್ಯಗಳಲ್ಲಿರುವ ಮಲಯಾಳಿಗಳಿಗೆ ಸಂಭ್ರಮಾಚರಣೆಗೆ ಮನೆಗೆ ಬರಲು ಬಯಸುವವರಿಗೆ ಭಾರೀ ಹೊರೆಯಾಗಲಿದೆ.
ಗಗನಕ್ಕೇರಿರುವ ವಿಮಾನ ದರಗಳಿಂದಾಗಿ ಹಲವರು ಕೇರಳ ಪ್ರವಾಸವನ್ನು ಮುಂದೂಡುತ್ತಿದ್ದಾರೆ. ಆದ್ದರಿಂದ ಈ ವಿಚಾರದಲ್ಲಿ ತುರ್ತು ಮಧ್ಯಸ್ಥಿಕೆ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಆಗ್ರಹಿಸಿದರು. ಅಗತ್ಯಬಿದ್ದರೆ ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ಒಂದು ತಿಂಗಳ ಕಾಲ ಯುಎಇಯಿಂದ ವಿಶೇಷ ಚಾರ್ಟರ್ಡ್ ವಿಮಾನ ವ್ಯವಸ್ಥೆ ಮಾಡುವಂತೆಯೂ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.