ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಪಾಕಿಸ್ತಾನಿ ನುಸುಳುಕೋರನನ್ನು ಗಡಿ ಭದ್ರತಾ ಪಡೆ ಸೋಮವಾರ ಕೊಂದು ಹಾಕಿದೆ. ವಾರದ ಅಂತರದಲ್ಲಿ ನಡೆಯುತ್ತಿರುವ ಎರಡನೇ ಘಟನೆ ಇದು.
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಪಾಕಿಸ್ತಾನಿ ನುಸುಳುಕೋರನನ್ನು ಗಡಿ ಭದ್ರತಾ ಪಡೆ ಸೋಮವಾರ ಕೊಂದು ಹಾಕಿದೆ. ವಾರದ ಅಂತರದಲ್ಲಿ ನಡೆಯುತ್ತಿರುವ ಎರಡನೇ ಘಟನೆ ಇದು.
ಭದ್ರತಾ ಪಡೆಗಳ ಸತತ ಎಚ್ಚರಿಕೆಯ ಹೊರತಾಗಿಯೂ ಸುಸುಳುಕೋರ ಗಡಿಯೊಳಗೆ ನುಗ್ಗಿದ್ದು, ಪರಾರಿಯಾಗುವ ವೇಳೆ ಆತನನ್ನು ಹೊಡೆದುರುಳಿಸಲಾಗಿದೆ.
ಜುಲೈ 30ರ ತಡ ರಾತ್ರಿ ಕಾವಲು ಸಿಬ್ಬಂದಿಗಳಿಗೆ ಅರ್ನಿಯಾ ಅಂತರರಾಷ್ಟ್ರೀಯ ಗಡಿ ಬಳಿ ಅನುಮಾನಸ್ಪದ ಓಡಾಟ ಕಂಡುಬಂದಿತ್ತು. ಸುಸುಳುಕೋರ ಗಡಿ ಭದ್ರತಾ ಪಡೆಯ ಕಡೆಗೆ ಬರುತ್ತಿದ್ದನ್ನು ಗಮನಿಸಿದ ಯೋಧರು ಆತನನ್ನು ಕೊಂದು, ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಬಿಎಸ್‌ಎಫ್ ವಕ್ತಾರ ತಿಳಿಸಿದ್ದಾರೆ.
ಕೂಡಲೇ ಸ್ಥಳವನ್ನು ಭದ್ರತಾ ಸಿಬ್ಬಂದಿಗಳು ಸುತ್ತುವರಿದಿದ್ದಾರೆ. ಸ್ಥಳದಲ್ಲಿ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಘಟನಾ ಸ್ಥಳದಿಂದ ಮೃತದೇಹವನ್ನು ಹೊರತೆಗೆಯಲಾಗಿದೆ.
ಜುಲೈ 25 ರಂದು ಸಾಂಬಾ ಜಿಲ್ಲೆಯ ರಾಮಗಢಿ ಎಂಬಲ್ಲಿ 4 ಕೆ.ಜಿಗೂ ಅಧಿಕ ಹೆರಾಯಿನ್ ಇಟ್ಟುಕೊಂಡು ಗಡಿನುಸುಳಲು ಯತ್ನಿಸಿದ್ದ ಪಾಕಿಸ್ತಾನಿ ನುಸುಳುಕೋರನನ್ನು ಹೊಡೆದುರುಳಿಸಲಾಗಿತ್ತು.