ನವದೆಹಲಿ: ಎನ್ ಸಿಪಿಯಲ್ಲಿನ ಬಂಡಾಯದ ನಡುವೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ, ಹಿರಿಯ ನಾಯಕನಿಗೆ ಬೆಂಬಲ ಸೂಚಿಸಿದ್ದಾರೆ.
ಶರದ್ ಪವಾರ್ ಅವರು ಕರೆದಿದ್ದ ಕಾರ್ಯಕಾರಿ ಸಮಿತಿ ಸಭೆಯ ನಂತರ ಜನಪಥ್ 6ರಲ್ಲಿರುವ ಅವರ ನಿವಾಸಕ್ಕೆ ತೆರಳಿದ ರಾಹುಲ್ ಗಾಂಧಿ ಅವರು, ಸಂಕಷ್ಟದ ಸಮಯದಲ್ಲಿ ನಾವು ನಿಮ್ಮ ಜೊತೆಗಿದ್ದೇವೆ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಾರ್ಯಕಾರಿ ಸಮಿತಿ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್ ಅವರು, ತಾವೇ ಎನ್‌ಸಿಪಿ ಅಧ್ಯಕ್ಷರು ಎಂದು ಪ್ರತಿಪಾದಿಸಿದರು.
ನಾನು ಎನ್‌ಸಿಪಿ ಅಧ್ಯಕ್ಷ, ಯಾರಾದರೂ ತಾವು ಎನ್ ಸಿಪಿ ಅಧ್ಯಕ್ಷರು ಎಂದು ಹೇಳಿದರೆ ಅದು ಸಂಪೂರ್ಣ ಸುಳ್ಳು. ಅದರಲ್ಲಿ ಯಾವುದೇ ಸತ್ಯವಿಲ್ಲ. ಯಾರಾದರೂ(ಅಜಿತ್ ಪವಾರ್) ಏನಾದರೂ ಹೇಳಿದರೆ ಅದಕ್ಕೆ ಯಾವುದೇ ಪ್ರಾಮುಖ್ಯತೆ ನೀಡಬೇಡಿ ಎಂದು ಪವಾರ್ ಹೇಳಿದ್ದಾರೆ.