ತಿರುವನಂತಪುರಂ: ಅಧಿಕೃತ ಗೌರವ ರಕ್ಷೆಗಳಿಂದ ವಿನಾಯ್ತಿ ನೀಡಿ ಧಾರ್ಮಿಕ ವಿಧಿವಿಧಾನಗಳನ್ನು ಮಾತ್ರ ಮಾಡಬೇಕು ಎಂದು ನಿಧನರಾದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಪತ್ನಿ ಸಾರ್ವಜನಿಕ ಆಡಳಿತ ಇಲಾಖೆಗೆ ಲಿಖಿತವಾಗಿ ಮಾಹಿತಿ ನೀಡಿದ್ದಾರೆ.
ಉಮ್ಮನ್ ಚಾಂಡಿ ಅವರಿಗೆ ಅಧಿಕೃತ ಗೌರವ ನಮನಗಳ ಅಗತ್ಯವಿಲ್ಲ ಎಂದು ಕುಟುಂಬಕ್ಕೆ ಈ ಹಿಂದೆ ಸ್ವತಃ ಉಮ್ಮನ್ ಚಾಂಡಿ ತಿಳಿಸಿದ್ದರು. ಇದರ ಬೆನ್ನಲ್ಲೇ ಅವರ ಪತ್ನಿ ಮರಿಯಮ್ಮ ಉಮ್ಮನ್ ಪತ್ರ ನೀಡಿದ್ದಾರೆ.
ಉಮ್ಮನ್ ಚಾಂಡಿಗೆ ಸಂಪೂರ್ಣ ಅಧಿಕೃತ ಗೌರವ ನೀಡಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂಪುಟ ಸಭೆಯಲ್ಲಿ ಹೇಳಿದ್ದಾರೆ. ಈ ಸಂಬಂಧ ಕುಟುಂಬದವರ ಅಭಿಪ್ರಾಯ ಕೇಳುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿತ್ತು. ಉಮ್ಮನ್ ಚಾಂಡಿ ನಿಧನಕ್ಕೆ ಸಂಪುಟ ಸಭೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಗುರುವಾರ ಮಧ್ಯಾಹ್ನ 3.30ಕ್ಕೆ ಪುತ್ತುಪಳ್ಳಿಯ ಸೇಂಟ್ ಜಾರ್ಜ್ ಆರ್ಥೋಡಾಕ್ಸ್ ವಲಿಯಪಳ್ಳಿಯಲ್ಲಿ ಸಮಾಧಿ ನಡೆಯಲಿದೆ.
ಧರ್ಮಗುರು ಬೆಸಿಲಿಯೋಸ್ ಮಾರ್ಥೋಮಾ ಮಾಥ್ಯೂಸ್ ತೃತೀಯ ನೇತೃತ್ವ ವಹಿಸುವರು.