ಕಾಸರಗೋಡು: ಬ್ಲಾಕ್ ಪಂಚಾಯತ್ ನೂತನ ಕಟ್ಟಡದ ಉದ್ಘಾಟನೆ ಜುಲೈ 31ರಂದು ಜರುಗಲಿದೆ. ರಾಜ್ಯ ಸ್ಥಳೀಯಾಡಳಿತ ಸಚಿವ ಎಂ.ಬಿ.ರಾಜೇಶ್ ಉದ್ಘಾಟಿಸುವರು. ಇದೇ ಸಂದರ್ಭ ಅಂಗವಿಕಲರಿಗೆ ತ್ರಿಚಕ್ರ ವಾಹನಗಳ ಕೀ ವಿತರಣೆ ಹಾಗೂ ಪಿಎಂಎವೈ ಮನೆಗಳ ಕೀಲಿಕೈ ವಿತರಣೆ ನಡೆಯಲಿದೆ.ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್, ಸಿ.ಎಚ್.ಕುಞಂಬು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಪಂಚಾಯಿತಿ ನಿರ್ದೇಶಕ ಎಚ್.ದಿನೇಶನ್, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಕಾಸರಗೋಡು ನಗರಸಭೆ ಅಧ್ಯಕ್ಷ ವಕೀಲ ವಿ.ಎಂ.ಮುನೀರ್, ಸ್ಥಳೀಯಾಡಳಿತ ಖಾತೆ ಮಾಜಿ ಸಚಿವ ಸಿ.ಟಿ.ಅಹ್ಮದಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
2019ರಲ್ಲಿ ಅಂದಿನ ಬ್ಲಾಕ್ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಕುಂuಟಿಜeಜಿiಟಿeಜ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. 2020 ರಲ್ಲಿ ಜಾರಿಗೆ ಬಂದ ಹೊಸ ಆಡಳಿತ ಮಂಡಳಿಯು ನಿರ್ಮಾಣ ಪೂರ್ತಿಗೊಳಿಸಿದೆ. ಕಾಸರಗೋಡು ಬ್ಲಾಕ್ ಪಂಚಾಯಿತಿ ಬದಿಯಡ್ಕ, ಚೆರ್ಕಳ, ಚೆಮ್ನಾಡ್, ಮೊಗ್ರಾಲ್‍ಪುತ್ತೂರು, ಮಧೂರು, ಕುಂಬಳೆ ಗ್ರಾಮ ಪಂಚಯಿತಿಗಳನ್ನು ಒಳಗೊಂಡಿದೆ.
1962ರಲ್ಲಿ ರಚನೆಯಾದ ಕಾಸರಗೋಡು ಬ್ಲಾಕ್ ಪಂಚಾಯಿತಿಗೆ ಹದಿಮೂರು ವರ್ಷಗಳ ನಂತರ 1975ರಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುವಂತಾಗಿತ್ತು. ಹೊಸ ಕಟ್ಟಡದ ಅಗತ್ಯವನ್ನು ಮೊದಲ ಪಿಣರಾಯಿ ವಿಜಯನ್ ಸರ್ಕಾಕ್ಕೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಎರಡು ಕೋಟಿ ರೂ. ಮೊತ್ತ ಮಂಜೂರುಗೊಳಿಸಿದ್ದು, 2019ರಲ್ಲಿ ಅಂದಿನ ಬ್ಲಾಕ್ ಪಂಚಾಯತ್ ಅಧ್ಯಕ್ಷ ಮುಹಮ್ಮದ್‍ಕುಞÂ ಚಾಯಿಂಡಡಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.