ಕಾಸರಗೋಡು: ಮಹಿಳೆಯರಿಗೆ ಸಕಾಲದಲ್ಲಿ ಹಕ್ಕು ಮತ್ತು ಮನ್ನಣೆ ನೀಡುವ ಉದ್ದೇಶದೊಂದಿಗೆ ಜೋಯಿಂಟ್ ಕೌನ್ಸಿಲ್ ರಾಜ್ಯ ಮಹಿಳಾ ಸಮಿತಿಯು ಅರ್ಧ ಲಕ್ಷ ಮಹಿಳಾ ನೌಕರರ ಸಹಿ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ಬೃಹತ್ ಮನವಿ ಸಮರ್ಪಿಸುವ ಯೋಜನೆಗೆ ಚಾಲನೆ ನೀಡಿತು.
ಕಾಸರಗೋಡು ಜಿಲ್ಲಾಮಟ್ಟದಲ್ಲಿ ಸಂಗ್ರಹಿಸಲಾದ ಸಹಿಯುಳ್ಳ ಹಸ್ತಾಂತರಿಸುವ ಕಾರ್ಯಕ್ರಮ ಕಾಸರಗೋಡು ಸಿವಿಲ್ ಸ್ಟೇಶನ್ ವಠಾರದಲ್ಲಿ ಸೋಮವಾರ ನಡೆಯಿತು. ಸಂಘಟನೆ ರಾಜ್ಯ ಸಮಿತಿ ಉಪಾಧ್ಯಕ್ಷೆ ಕೆ.ಅಜಿನಾ ಉದ್ಘಾಟಿಸಿದರು. ಮಹಿಳಾ ಸಮಿತಿಯ ಕಾಸರಗೋಡು ಜಿಲ್ಲಾಧ್ಯಕ್ಷೆ ರಾಗೀರಾಜ್ ಆರ್.ಜಿ ಅಧ್ಯಕ್ಷತೆ ವಹಿಸಿದ್ದರು. ಜೋಯಿಂಟ್ ಕೌನ್ಸಿಲ್ ರಾಜ್ಯ ಉಪಾಧ್ಯಕ್ಷ ನರೇಶ್ ಕುಮಾರ್ ಕುನ್ನಿಯೂರು, ರಾಜ್ಯ ಸಮಿತಿ ಸದಸ್ಯರಾದ ಪ್ರಸಾದ್ ಕರುವಾಳಂ, ಪ್ರದೀಪ್ ಕುಮಾರ್ ಪಿ.ಪಿ, ರಾಜ್ಯ ಮಹಿಳಾ ಸಮಿತಿ ಸದಸ್ಯೆ ಅಮೀನ ಎ ಉಪಸ್ಥಿತರಿದ್ದರು. ಮಹಿಳಾ ಸಮಿತಿಯ ಪ್ರೀತಾ ಕೆ.ಸ್ವಾಗತಿಸಿದರು. ಜತೆ ಕಾರ್ಯದರ್ಶಿ ರೇಜಿ ಕೆ.ಆರ್ ವಂದಿಸಿದರು.