ನವದೆಹಲಿ: ಇಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ನಿವಾಸ ಮೇಲೆ ಇಂದು ಬೆಳಿಗ್ಗೆ (ಸೋಮವಾರ) ಡ್ರೋಣ್ ಹಾರಾಟ ನಡೆಸಿದೆ. ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.
ನವದೆಹಲಿ: ಇಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ನಿವಾಸ ಮೇಲೆ ಇಂದು ಬೆಳಿಗ್ಗೆ (ಸೋಮವಾರ) ಡ್ರೋಣ್ ಹಾರಾಟ ನಡೆಸಿದೆ. ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.
ಬೆಳಿಗ್ಗೆ ಸುಮಾರು 5 ಗಂಟೆ ವೇಳೆಗೆ ಡ್ರೋಣ್ ಒಂದು ಪ್ರಧಾನಿಯವರ ನಿವಾಸದ ಮೇಲೆ ಹಾರಾಡುವುದು ಗಮನಕ್ಕೆ ಬಂದಿತ್ತು.
ತನಿಖೆ ಪ್ರಗತಿಯಲ್ಲಿದ್ದು, ಸಂಶಯಾಸ್ಪದವಾದುದ್ದು ಯಾವುದೂ ಕಂಡು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
'ಪ್ರಧಾನಿಯವರ ನಿವಾಸದ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಲಾಗಿದೆ. ಆದರೆ ಯಾವುದೇ ವಸ್ತುಗಳು ಕಂಡು ಬಂದಿಲ್ಲ. ಈ ಬಗ್ಗೆ ವಾಯು ಸಂಚಾರ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಲಾಗಿದ್ದು, ಪ್ರಧಾನಿ ನಿವಾಸದ ಬಳಿ ಯಾವುದೇ ಹಾರಾಟದ ವಸ್ತು ಕಂಡು ಬಂದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ' ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.