ಕಾಸರಗೋಡು: ಜಿಲ್ಲಾ ಯೋಗ ಅಸೋಸಿಯೇಶನ್ ಹಾಗೂ ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಆಯೋಜಿಸಿರುವ ಜಿಲ್ಲಾ ಕ್ರೀಡಾ ಯೋಗ ಚಾಂಪಿಯನ್‍ಶಿಪ್ ಕಾಸರಗೋಡು ಮುನ್ಸಿಪಲ್ ಟೌನ್ ಹಾಲ್‍ನಲ್ಲಿ ಜರುಗಿತು.
ಚಾಂಪಿಯನ್‍ಶಿಪ್ ಆಯೋಜನಾ ಸಮಿತಿಯ ಅಧ್ಯಕ್ಷ, ಶಾಸಕ ಸಿ.ಎಚ್.ಕುಞಂಬು ಸಮಾರಂಭ ಉದ್ಘಾಟಿಸಿದರು.ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಗರಸಬ ಅದ್ಯಕ್ಷ ವಿ.ಎಂ ಮುನೀರ್ ಅಧ್ಯಕ್ಷತೆ ವಹಿಸಿದ್ದರು. ನಗರಸಬ ಸದಸ್ಯೆ ವಿಮಲಾಶ್ರೀಧರನ್, ಯೋಗ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಬಿ. ಬಲಚಂದ್ರನ್, ಉಪಧ್ಯಕ್ಷ ಬ್ರಹ್ಮಶ್ರೀ ಬಾಲಕ್ರಷ್ಣ ಸ್ವಾಮಿ, ಹರಿಹರನ್ ನಂಬ್ಯರ್ ಕೆ, ಪಿ.ಪಿ.ರಾಜನ್, ಕೆ.ವಿ.ಗಣೇಶ್, ಎಂ.ವಿ.ನಾರಾಯಣನ್, ಅಶೋಕ್ ರಾಜ್ ಮುಂತದವರು ಉಪಸ್ಥಿತರಿದ್ದರು. ಪಿ.ಪಿ.ಸುಕುಮಾರನ್ ಸ್ವಾಗತಿಸಿದರು. ಪಿ.ವಿ ಚಂದ್ರನ್ ವಂದಿಸಿದರು.
ರಾಷ್ಟ್ರೀಯ ಮಟ್ಟದವರೆಗೆ ಸ್ಪರ್ಧಿಸಬಹುದಾದ ಪಠ್ಯಕ್ರಮದ ಪ್ರಕಾರ ಸ್ಪರ್ಧೆಯು 8 ರಿಂದ 18 ವರ್ಷದ ವರೆಗಿನ ಸಬ್‍ಜೂನಿಯರ್ ವಿಭಾಗ ಮತ್ತು ಮತ್ತು 18ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಯಸ್ಸಿನವರಿಗಗಿ ಸ್ಪರ್ಧೆ ಏರ್ಪಡಿಸಲಾಗಿತ್ತು.