HEALTH TIPS

ಸಿರಿಯಾದಲ್ಲಿ ಕೇರಳ ಮೂಲದ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ತರಬೇತಿ: ಅಫ್ಘಾನಿಸ್ತಾನದ ಐಎಸ್ ನಾಯಕರ ಸಂಬಂಧ: ಟೆಲಿಗ್ರಾಮ್ ಗುಂಪಿನ ಮೂಲಕ ಸಂವಹನ: ಭಯೋತ್ಪಾದನೆಯ ಮಾರ್ಗಗಳನ್ನು ಬಹಿರಂಗಪಡಿಸಿದ ಆಶಿಫ್

                   ಕೊಚ್ಚಿ: ಇಸ್ಲಾಮಿಕ್ ಸ್ಟೇಟ್ಸ್ ನತ್ತ ಆಕರ್ಷಿತರಾಗಿರುವ ಕೇರಳೀಯ ಭಯೋತ್ಪಾದಕರು ಸಿರಿಯಾದಿಂದ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಕೇರಳ ಘಟಕವು ಅಫ್ಘಾನಿಸ್ತಾನದಲ್ಲಿರುವ ಭಯೋತ್ಪಾದಕ ಸಂಘಟನೆಗಳ ಮುಖಂಡರೊಂದಿಗೆ ಸಂವಹನ ನಡೆಸಿರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಸೂಚನೆಗಳೂ ಸಿಕ್ಕಿವೆ.

                   ಪ್ರಸ್ತುತ, ಎನ್‍ಐಎ ಸಂವಹನ ನಡೆಸುತ್ತಿದ್ದ ಟೆಲಿಗ್ರಾಮ್ ಗುಂಪಿನ ಸದಸ್ಯರಿಗೆ ತನಿಖೆಯನ್ನು ವಿಸ್ತರಿಸಿದೆ.

             ತಮಿಳುನಾಡಿನಿಂದ ಎನ್‍ಐಎಗೆ ಸಿಕ್ಕಿಬಿದ್ದಿರುವ ಕೇರಳೀಯ ಭಯೋತ್ಪಾದಕ ಮತ್ತು ಆತನ ಸಹಚರರನ್ನು ವಿಚಾರಣೆಗೆ ಒಳಪಡಿಸಿದಾಗ ಹೊಸ ಮಾಹಿತಿ ಹೊರಬಿದ್ದಿದೆ. ಬಂಧಿತ ಆಶಿಫ್‍ಗೆ ಸಂಬಂಧಿಸಿದ ಕೆಲವರು ಸಿರಿಯಾದಿಂದ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಸದ್ಯ ಅವರನ್ನು ಕೇಂದ್ರೀಕರಿಸಿ ತನಿಖೆ ಪ್ರಗತಿಯಲ್ಲಿದೆ. ಈ ಹಿಂದೆ ತಮಿಳುನಾಡು ಮತ್ತು ಕರ್ನಾಟಕದ ಅರಣ್ಯಗಳಲ್ಲಿ ಇವರಿಗಾಗಿ ಆಯುಧ ತರಬೇತಿ ಹಾಗೂ ವಿಶೇಷ ಶಿಬಿರಗಳನ್ನು ಆಯೋಜಿಸಲಾಗಿತ್ತು. ಇದಲ್ಲದೇ ಸಿರಿಯಾದಿಂದಲೂ ತರಬೇತಿ ಪಡೆದಿದ್ದಾರೆ. ಬಂಧಿತರ ಸಹಚರ ಸಿರಾಜುದ್ದೀನ್‍ಗಾಗಿ ಸದ್ಯ ತನಿಖೆ ಮುಂದುವರಿದಿದ್ದು, ಆತ ಸಿರಿಯಾಗೆ ತೆರಳಿರುವ ಸುಳಿವು ಸಿಕ್ಕಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿಕೆ ನೀಡಿದೆ.

                ಕೇರಳ ಸೇರಿದಂತೆ ಭಯೋತ್ಪಾದಕ ದಾಳಿ ನಡೆಸಲು ಯೋಜನೆ ರೂಪಿಸಿದ್ದ ತ್ರಿಶೂರ್ ನಿವಾಸಿ ಆಶಿಫ್ ನನ್ನು ದಿನಗಳ ಹಿಂದೆ ಬಂಧಿಸಲಾಗಿತ್ತು. ಇನ್ನು ಮೂವರು ಶಂಕಿತರು ಸದ್ಯ ಎನ್‍ಐಎ ವಶದಲ್ಲಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುವಾಗ ಇಂತಹ ಉಗ್ರಗಾಮಿ ಧಾರ್ಮಿಕ ವಿಚಾರಗಳಿಗೆ ಆಕರ್ಷಿತನಾದೆ ಮತ್ತು ಸಮಾನ ಮನಸ್ಕ ಗುಂಪುಗಳೊಂದಿಗೆ ಕೆಲಸ ಮಾಡಲು ಆರಂಭಿಸಿದ್ದಾಗಿ ಆಶಿಫ್ ಹೇಳಿಕೆ ನೀಡಿದ್ದಾನೆ. ಈ ಉದ್ದೇಶಕ್ಕಾಗಿ ಟೆಲಿಗ್ರಾಮ್ ಗ್ರೂಪ್ ಅನ್ನು ಪ್ರಾರಂಭಿಸಲಾಗಿತ್ತು. ತನಿಖಾ ತಂಡವು ಆಶಿಫ್‍ನ ಪ್ರಯಾಣದ ಹಿನ್ನೆಲೆಯನ್ನೂ ವಿವರವಾಗಿ ಪರಿಶೀಲಿಸುತ್ತಿದೆ. ಗಲ್ಫ್ ರಾಷ್ಟ್ರಗಳಿಗೆ ಭೇಟಿ ನೀಡಿರುವ ಆಶಿಫ್ ಅಲ್ಲಿಂದ ಬೇರೆ ದೇಶಗಳಿಗೆ ಹೋಗಿರುವ ಬಗ್ಗೆ ಎನ್ ಐಎ ಪರಿಶೀಲನೆ ನಡೆಸುತ್ತಿದೆ.   

           ಅಫ್ಘಾನಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿರುವ ಐಎಸ್ ನಾಯಕರೊಂದಿಗೆ ಆತ ಸಂವಹನ ನಡೆಸಿರುವ ಸೂಚನೆಗಳೂ ತನಿಖೆಯಿಂದ ವ್ಯಕ್ತಗೊಂಡಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries