ಪೆರ್ಲ : ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ವಿಜ್ಞಾನ ಸಂಘದ ಉದ್ಘಾಟನೆ ಹಾಗೂ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ನೇಚರ್ ಕ್ಲಬ್ ಆಶ್ರಯದಲ್ಲಿ ಔಷಧೀಯ ಸಸ್ಯಗಳ ಪ್ರದರ್ಶನ ಶಾಲಾ ಗ್ರಂಥಾಲಯ ಸಭಾಂಗಣದಲ್ಲಿ ಜರುಗಿತು.
ವಿದ್ಯಾರ್ಥಿಗಳಲ್ಲಿ ಔಷಧೀಯ ಸಸ್ಯಗಳ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಔಷದಿಯ ಸಸ್ಯಗಳ ಬಳಕೆ ಬಗ್ಗೆ ಮಾಃಇತಿ ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಕ್ಕದ ಗಿಡ, ತುಂಬೆ, ಶಂಖಪುಷ್ಪ, ಅಮೃತಬಳ್ಳಿ ಸೇರಿದಂತೆ ಹಲವು ಪ್ರಬೇದಗಳ ಸಸ್ಯಗಳನ್ನು ಪರಿಚಯಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಔಷಧೀಯ ಸಸ್ಯಗಳನ್ನು ಪ್ರದರ್ಶಿಸಿ ಅವುಗಳ ಔಷಧೀಯ ಗುಣಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಆಸಕ್ತಿವಹಿಸಿ ವಿವಿಧ ಔಷದಿಯ ಸಸ್ಯಗಳನ್ನು ಶಾಲೆಗೆ ತಂದು, ಇವುಗಳ ಬಗ್ಗೆ ವಿವರಣೆಯನ್ನೂ ನೀಡಿದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಕೇಶವ ಪ್ರಕಾಶ್ ಸಮಾರಂಭ ಉದ್ಘಾಟಿಸಿದರು. ನೇಚರ್ ಕ್ಲಬ್ ಆಯೋಜಕ, ಶಿಕ್ಷಕ ಉಮೇಶ್. ಕೆ, ಮಹಾಬಲ ಭಟ್ ಹಾಗೂ ಇತರ ಶಿಕ್ಷಕರು ಉಪಸ್ಥಿತರಿದ್ದರು. ಅಧ್ಯಾಪಕರಾದ ಕೃಷ್ಣ ಪ್ರಕಾಶ ಸ್ವಾಗತಿಸಿದರು. ಕೃಷ್ಣರಾಜ ಕಾರ್ಯಕ್ರಮ ನಿರೂಪಿಸಿದರು. ಮತ್ತಿತರ ಅಧ್ಯಾಪಕರು ಭಾಗವಹಿಸಿದರು. ವಿದ್ಯಾರ್ಥಿ ಶ್ರೀಶ ನಾರಾಯಣ ಧವಂದಿಸಿದರು.