ಕಣ್ಣೂರು; ಸದ್ಯಕ್ಕೆ ಸಿಲ್ವರ್ ಲೈನ್ ಯೋಜನೆಗೆ ಕೇರಳ ಮುಂದಾಗುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ರಾಜ್ಯ ಮಾತ್ರ ಯೋಚಿಸಿದರೆ ಅದು ಸಾಕಾರಗೊಳ್ಳುವುದಿಲ್ಲ ಎನ್ನಲಾಗಿದೆ.
ಕೇಂದ್ರ ಈಗ ಅನುಕೂಲಕರ ನಿಲುವು ತಳೆಯುತ್ತಿಲ್ಲ. ಕೇಂದ್ರದ ಅನುಮತಿಗಾಗಿ ಕಾಯುತ್ತಿದ್ದು, ಕೇರಳ ಮಾತ್ರ ಯೋಜನೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಪಟ್ಯಂ ಗೋಪಾಲನ್ ಸ್ಮಾರಕ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಜಿಲ್ಲಾ ಗ್ರಂಥಾಲಯ ಪರಿಷತ್ತು ಜಂಟಿಯಾಗಿ ಆಯೋಜಿಸಿದ್ದ ಅಭಿವೃದ್ಧಿ ವಿಚಾರ ಸಂಕಿರಣದ ಮುಕ್ತ ವೇದಿಕೆಯಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು.
ಒಂದು ಹಂತದಲ್ಲಿ ಕೇಂದ್ರವು ಯೋಜನೆಗೆ ಅನುಮೋದನೆ ನೀಡಬೇಕಾಗುತ್ತದೆ. ಜನರು ತ್ವರಿತ ರೈಲು ಪ್ರಯಾಣವನ್ನು ಬಯಸುತ್ತಾರೆ. ವಂದೇ ಭಾರತ್ ಬಂದಾಗ ಅದಕ್ಕೆ ನೀಡಿದ ಸ್ವಾಗತ ಜನಮನದ ಪ್ರತಿಬಿಂಬ. ಕೇರಳದ ವೇಗದ ಸಮಸ್ಯೆಗಳು ಬಗೆಹರಿದಿಲ್ಲ. ಎಡ ಸÀರ್ಕಾರ ಮಾತ್ರ ಯೋಚಿಸಿದರೆ ಸಿಲ್ವರ್ ಲೈನ್ ಜಾರಿಗೆ ತರಲು ಸಾಧ್ಯವಿಲ್ಲ. ಕೇಂದ್ರ ಈಗ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಎಲ್‍ಡಿಎಫ್‍ನಲ್ಲಿ ಜನರಿಗೆ ನಂಬಿಕೆ ಇದೆ. ಈ ಜನಮಾನಸವನ್ನು ಬುಡಮೇಲು ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪಿಣರಾಯಿ ಹೇಳಿದರು.