ಕಾಸರಗೋಡು: ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 1.23ಲಕ್ಷ ಮಂದಿಗೆ ಭೂಮಿಯ ಹಕ್ಕುಪತ್ರ ವಿತರಿಸಲು ಸಾಧ್ಯವಾಗಿದೆ ಎಂದು ಕಂದಾಯ ಮತ್ತು ವಸತಿ ಖಾತೆ ಸಚಿವ ಕೆ. ರಾಜನ್ ತಿಳಿಸಿದ್ದಾರೆ. ಅವರು ಪಡನ್ನ ಸ್ಮಾರ್ಟ್ ವಿಲೇಜ್ ಕಚೇರಿ ಉದ್ಘಾಟಿಸಿ ಮಾತನಾಡಿದರು. ಕಳೆದ ಏಳು ವರ್ಷಗಳ ಕಾಲಾವಧಿಯಲಕ್ಲಿ ಭೂರಹಿತರಿಲ್ಲದ ಕೇರಳ ಯೋಜನೆಯನ್ವಯ ಭೂಮಿ ವಿತರರಣೆಯನ್ವಯ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಭೂಮಿಯ ಮಾಲೀಕರಾಗಿದ್ದಾರೆ. ಜನಪ್ರತಿನಿಧಿಗಳು, ಅüಕಾರಿಗಳು, ನಾನಾ ವಿಭಾಗಗಳ ಪ್ರತಿನಿಧಿಗಳನ್ನು ಸೇರಿಸಿ ರಚಿಸುವ ಗ್ರಾಮ ಮಟ್ಟದ ಗ್ರಾಮ ಜನಕೀಯ ಸಮಿತಿ ಎಲ್ಲ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಲ್ಳುವ ಕೇಂದ್ರಗಳಾಗಿ ಬದಲಾಗಲಿದೆ ಎಂದು ತಿಳಿಸಿದರು.
ಶಾಸಕ ಎಂ. ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ನೀಲೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯರ, ಪಡನ್ನ ಗ್ರಾ.ಪಂ ಅಧ್ಯಕ್ಷ ಮಹಮ್ಮದ್ ಅಸ್ಲಂ, ನೀಲೇಶ್ವರ ಬ್ಲಾಕ್ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸುಮೇಶ್, ಬ್ಲಾಕ್ ಪಂಚಾಯಿತಿ ಸದಸ್ಯೆ ಟಿ.ರತಿಲಾ, ಪಡನ್ನ ಗ್ರಾಮ ಪಂಚಾಯಿತಿ ಸದಸ್ಯೆ ಎ.ಕೆ.ಜಾಸ್ಮಿನ್, ಎಡಿಎಂ. ಕೆ.ನವೀನ್ ಬಾಬು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಟಿ.ಪಿ.ಕುಂಜಬ್ದುಲ್ಲಾ, ಮುಖೇಶ್ ಬಾಲಕೃಷ್ಣನ್, ಪಿ.ಕೆ.ಫೈಸಲ್, ಟಿ.ಪಿ.ಮುತ್ತಲಿಬ್, ಎಂ.ಕೆ.ಸಿ.ಅಬ್ದುಲ್ ರಹಮಾನ್, ಟಿ.ವಿ.ಶಿಬಿನ್ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಸ್ವಾಗತಿಸಿದರು. ಗ್ರಾಮಾಧಿಕಾರಿ ಎ.ರಮಣಿ ವಂದಿಸಿದರು.
ಪಿಲಿಕೋಡ್ ಸ್ಮಾರ್ಟ್ ವಿಲೇಜ್ ಉದ್ಘಾಟನೆ:
ಇದೇ ಸಂದರ್ಭ ಪಿಲಿಕೋಡು ಸ್ಮಾರ್ಟ್ ವಿಲೇಜ್ ಕಚೇರಿಯನ್ನು ಕಂದಾಯ ಮತ್ತು ವಸತಿ ಇಲಾಖೆ ಸಚಿವ ಕೆ.ರಾಜನ್ ಉದ್ಘಾಟಿಸಿದರು. ಎಂ. ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು.