ಕಾಸರಗೋಡು: ಮಹಿಳಾಮೋರ್ಚಾ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಿರು ಧಾನ್ಯಗಳ ಮಾಸಾಚರಣೆ ಅಂಗವಾಗಿ ಕಾಸರಗೋಡು ಸುನಾಮಿ ಕಾಲೋನಿಯ ಮನೆಗಳಿಗೆ ನವಣೆ, ರಾಗಿ ಮುಂತಾದ ಕಿರುಧಾನ್ಯಗಳಿಂದ ತಯಾರಿಸಿದ ವಿವಿಧ ಖಾದ್ಯಗಳನ್ನು ವಿತರಿಸುವ ಮೂಲಕ ಕಿರುಧಾನ್ಯಗಳ ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾಧ್ಯಕ್ಷೆ ಪುಷ್ಪಾ ಗೋಪಾಲನ್, ಮಹಿಳಾ ಮೋರ್ಚಾ ಜಿಲ್ಲಾ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಶ್ರೀಲತಾ ಟೀಚರ್, ಬಿಜೆಪಿ ರಾಜ್ಯ ಪರಿಷತ್ ಸದಸ್ಯೆ ಸವಿತಾ ಟೀಚರ್, ನಗರಸಭಾ ಸದಸ್ಯೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ, ಮಹಿಳಾ ಮೋರ್ಚಾ ಕಾಞಂಗಾಡ್ ಮಂಡಲ ಅಧ್ಯಕ್ಷೆ ಶಾಲಿನಿ ನೇತೃತ್ವ ವಹಿಸಿದ್ದರು. ರೋಗನಿರೋಧಕ ಶಕ್ತಿಯೊಂದಿಗೆ ಪೌಷ್ಠಿಕಾಂಶ ಹೊಂದಿರುವ ಕಿರುಧಾನ್ಯಗಳನ್ನು ವ್ಯಾಪಕಗೊಳಿಸುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಗುರಿಯೊಂದಿಗೆ ಕಾರ್ಯಖ್ರಮ ಹಮ್ಮಿಕೊಳ್ಳಲಾಗಿದೆ.