HEALTH TIPS

ಕ್ಷಯರೋಗ ನಿರ್ಮೂಲನೆ ವ್ಯಾಪಾರ ಪ್ರದೇಶಗಳಲ್ಲಿ ಶಿಬಿರ, ಜಾಗೃತಿ ಕಾರ್ಯಕ್ರಮ

 

                 ಕಾಸರಗೋಡು: ಜಿಲ್ಲೆಯ ವಾಣಿಜ್ಯ ಸಂಸ್ಥೆಗಳು ಮತ್ತು ಮಾಲ್‍ಗಳ ಉದ್ಯೋಗಿಗಳಿಗೆ ಕ್ಷಯರೋಗ ನಿರ್ಮೂಲನಾ ಶಿಬಿರ ಮತ್ತು ಜಾಗೃತಿ ತರಗತಿಗಳನ್ನು ನಡೆಸಲಾಗುವುದು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎ.ಮುರಳೀಧರ ನಲ್ಲೂರ ನೇತೃತ್ವದಲ್ಲಿ ಶಿಬಿರ ನಡೆಯಲಿದೆ. 

             ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಸಂಭವಿಸುವ ಪ್ರದೇಶಗಳಲ್ಲಿ ಚಟುವಟಿಕೆ ನಡೆಸುತ್ತಿರುವ ಸಂಸ್ಥೆಗಳು, ಹವಾನಿಯಂತ್ರಿತ ಶೋರೂಮ್‍ಗಳು, ಮಾಲ್‍ಗಳು, ಧೂಳಿನ ಸಮಸ್ಯೆಯಿರುವ ಪ್ರದೇಶಗಳಲ್ಲಿ ಕಆರ್ಯಾಚರಿಸುವ ಸಂಸ್ಥೆಗಳು ಇತ್ಯಾದಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಸುಮಾರು 50 ಜನರು ಕೆಲಸ ಮಾಡುವ ಸಂಸ್ಥೆಗಳಲ್ಲಿ ಮತ್ತು ಇತರ ಸಣ್ಣ ಸಂಸ್ಥೆಗಳಲ್ಲಿ ವ್ಯಾಪಾರಿ ಸಂಘಗಳು ಅಥವಾ ಇತರರ ಸಹಕಾರದೊಂದಿಗೆ ಸ್ಥಳದಲ್ಲೇ ತಪಾಸಣೆ ಯಾ ಸ್ಥಳದಲ್ಲಿ ಶಿಬಿರ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗುವುದು. ಟಿಬಿ ನಿರ್ಮೂಲನಾ ಶಿಬಿರಗಳಿಗೆ ಸಹಕರಿಸಲು ಆಸಕ್ತಿ ಹೊಂದಿರುವ ವ್ಯಾಪಾರ ಸಂಸ್ಥೆಗಳು ಮತ್ತು ಸಂಘಟನೆಗಳು ಜಿಲ್ಲಾ ಕ್ಷಯರೋಗ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. 

                ಕ್ಷಯರೋಗ ಸಂಬಂಧಿ ರೋಗನಿರ್ಣಯಕ್ಕಾಗಿಯೂ ಸಂಪರ್ಕಿಸಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994 222480) ಸಂಪಕಿಸುವಂತೆ ಪ್ರಕಟಣೆ ತಿಳಿಸಿದೆ. 

                        ಮೊದಲ ಶಿಬಿರ:

               ಮೊದಲ ಶಿಬಿರ ಕಾಸರಗೋಡು ಗೋಲ್ಡ್ ಶೋರೂಂನಲ್ಲಿ ನಡೆಯಿತು. ಜಿಲ್ಲಾ ಕ್ಷಯರೋಗ ಘಟಕದ ವೈದ್ಯಾಧಿಕಾರಿ ಡಾ.ಪಿ.ನಾರಾಯಣ ಪ್ರದೀಪ ನೇತೃತ್ವದಲ್ಲಿ ನಡೆದ ಶಿಬಿರ ಮತ್ತು ತರಗತಿಯಲ್ಲಿ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಎಸ್.ರತೀಶ್, ಜಿ.ಆಶಿತಾ, ಟಿಬಿ ಆರೋಗ್ಯ ಸಂದರ್ಶಕ ಎಸ್.ಕೆ.ನಿಧೀಶ್ ಲಾಲ್,  ರಜನಿಕಾಂತ್ ಎಸ್.ಜಿತ್ ಹಾಗೂ ಮೇಲ್ವಿಚಾರಕಿ ಪಿ.ಪ್ರವೀಣಾ ಉಪಸ್ಥೊತರಿದ್ದರು. ಮಲಬಾರ್ ಗೋಲ್ಡ್ ಪರವಾಗಿ ಶೋರೂಂ ಮುಖ್ಯಸ್ಥ ಅಬ್ದುಲ್ ಬಶೀರ್, ಉಪ ಶೋರೂಂ ಮುಖ್ಯಸ್ಥರಾದ ಪಿ.ಮಹರೂಫ್, ಪಿ.ಚಂದ್ರಶೇಖರನ್ ನಾಯರ್, ಸಂಯೋಜಕ ಎನ್.ಮುಹಮ್ಮದ್ ಶರೀಫ್, ಸಾಂಖ್ಯಿಕ ಸಹಾಯಕರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries