ಬದಿಯಡ್ಕ: ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಭಾಗವಾಗಿ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಸಂಜೆ ಕನ್ನಡ ಸಂಘ ಬಹರೇನ್ ನ ಯಕ್ಷೋಪಾಸನ ಯಕ್ಷಗಾನ ಅಧ್ಯಯನ ಕೇಂದ್ರದ ಹಿರಿಯ ವಿದ್ಯಾರ್ಥಿಗಳಿಂದ ‘ಗಿರಿಜಾ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಿತು.
ಹಿಮ್ಮೇಳದಲ್ಲಿ ಸತೀಶ್ ಶೆಟ್ಟಿ ಬೋಂದೇಲ್(ಭಾಗವತರು), ರೋಹಿತ್ ಉಚ್ಚಿಲ(ಮದ್ದಳೆ),ಕೌಶಿಕ್ ರಾವ್ ಪುತ್ತಿಗೆ(ಚೆಂಡೆ),ಹರೀಶ್ ಆಚಾರ್ಯ(ಚಕ್ರತಾಳ)ದಲ್ಲಿ ಹಕರಿಸಿದರು. ಮುಮ್ಮೇಳದಲ್ಲಿ ಪ್ರಜ್ಞಾ ಜಗದೀಶ್, ಮಹಸ್ವಿನ ರಾವ್ ಪೇಜಾವರ, ಪೂರ್ವಜ ಜಗದೀಶ್, ಪ್ರಾರ್ಥನಾ ಗಣೇಶ್, ಧ್ವನಿ ರಾಮಪ್ರಸಾದ್, ದೀಪಕ್ ರಾವ್ ಪೇಜಾವರ, ಸಾತ್ವಿಕ್ ನೆಲ್ಲಿತೀರ್ಥ, ಶೋಭಾ ರಾಮಪ್ರಸಾದ್, ನಮಿತ ಸಾಲಿಯಾನ್, ತೀರ್ಥ ಗಣೇಶ್, ಆಶಾ ಅಜಿತ್, ಪೂರ್ಣಿಮಾ ಜಗದೀಶ್, ರೇಶ್ಮ ಶೆಟ್ಟಿ, ಪ್ರಕೃತಿ ಶೆಟ್ಟಿ ವಿವಿಧ ಪಾತ್ರಗಳನ್ನು ನಿರ್ವಹಿಸಿದರು.