ಕೋಲ್ಕತ್ತ: ಜೀವ ವೈವಿಧ್ಯತೆಯ ಸಂರಕ್ಷಣೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಮುಖ ಆದ್ಯತೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಶನಿವಾರ ಹೇಳಿದರು.
ಕೋಲ್ಕತ್ತ: ಜೀವ ವೈವಿಧ್ಯತೆಯ ಸಂರಕ್ಷಣೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಮುಖ ಆದ್ಯತೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಶನಿವಾರ ಹೇಳಿದರು.
ಭಾರತೀಯ ಪ್ರಾಣಿ ಸರ್ವೇಕ್ಷಣಾ ಸಂಸ್ಥೆಯ (ಝಡ್‌ಎಸ್‌ಐ) 108ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಕಳೆದ 10 ವರ್ಷಗಳಲ್ಲಿ 45 ಜೌಗು ಪ್ರದೇಶಗಳನ್ನು 'ರಾಮ್‌ಸಾರ್' (ಜೌಗು ಪ್ರದೇಶಗಳಿಗೆ ನೀಡುವ ಅಂತರರಾಷ್ಟ್ರೀಯ ಪ್ರಾಮುಖ್ಯತೆ) ಪ್ರದೇಶಗಳೆಂದು ಘೋಷಿಸಲಾಗಿದೆ' ಎಂದು ತಿಳಿಸಿದರು.
'ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳನ್ನು ತಂದು ಬಿಟ್ಟು, ನಶಿಸಿಹೋದ ಪ್ರಾಣಿ ಸಂಕುಲವನ್ನು ಮರುಪರಿಚಯಿಸಿರುವ ನಮ್ಮ ಯೋಜನೆಗೆ ಜಾಗತಿಕ ಪ್ರಶಂಸೆ ದೊರೆತಿದೆ' ಎಂದು ಹೇಳಿದರು.
'ಹವಾಮಾನ ಬದಲಾವಣೆಯು ಮಾನವನಲ್ಲಿನ ಶ್ರೇಷ್ಠತೆ ಭಾವನೆಯನ್ನು ಅಳಿಸಿಹಾಕುತ್ತಿದೆ. ಪ್ರಕೃತಿಗಿಂತ ನಾವು ಶ್ರೇಷ್ಠರಲ್ಲ. ನಾವು ಇದರ ಭಾಗವಷ್ಟೆ. ನಾವದನ್ನು ಸಂರಕ್ಷಿಸಲೇಬೇಕು' ಎಂದು ತಿಳಿಸಿದರು.
ಚೀತಾಗಳು ನಶಿಸಿದ 7 ದಶಕಗಳ ನಂತರ ಕೇಂದ್ರ ಸರ್ಕಾರವು ನಮೀಬಿಯಾದಿಂದ ಎಂಟು ಮತ್ತು ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ತಂದು ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಬಿಟ್ಟಿದೆ. ಈ ಪೈಕಿ ಮೂರು ಚೀತಾಗಳು ಮೃತಪಟ್ಟಿವೆ.