ಹೈದಾರಾಬಾದ್: ಜನಪ್ರಿಯ ಬ್ರ್ಯಾಂಡ್ ಕೋಬ್ರಾ ಬಿಯರ್ನ್ನು ಭಾರತದಲ್ಲಿ ಮತ್ತೊಮ್ಮೆ ತಯಾರಿಸಿ, ವಿತರಿಸುವ ಬಗ್ಗೆ ಕೋಬ್ರಾ ಬಿಯರ್ ಸಂಸ್ಥಾಪಕ ಲಾರ್ಡ್ ಕರಣ್ ಬಿಲಿಮೋರಿಯಾ ಕಾಯುತ್ತಿರುವುದಾಗಿ ಹೇಳಿದ್ದಾರೆ.
ಬಿಲಿಮೋರಿಯಾ ಬ್ರಿಟಿಷ್ ಉದ್ಯಮಿ ಮತ್ತು ಹೌಸ್ ಆಫ್ ಲಾರ್ಡ್ಸ್ ಸದಸ್ಯರಾಗಿದ್ದು ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಉದ್ಯಮಿಯು, ಭಾರತದಲ್ಲಿ ಶೀಘ್ರವಾಗಿ ಕೋಬ್ರಾ ಬಿಯರ್ ಜನಪ್ರಿಯತೆಯನ್ನು ಗಳಿಸಿತ್ತು. ಆದರೆ ಬಿಹಾರ ಸರ್ಕಾರದ ಮದ್ಯನಿಷೇಧದ ನೀತಿಯಿಂದಾಗಿ ಕಂಪನಿಯು ಎದುರಿಸಿದ ದುರದೃಷ್ಟಕರ ಹಿನ್ನಡೆಯಿಂದಾಗಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸಿತ್ತು ಎಂದು ಹೇಳಿದ್ದಾರೆ. 2016ರ ನಿಷೇಧದ ಹೊರತಾಗಿಯೂ ಏಳು ವರ್ಷಗಳ ನಂತರ ನಮ್ಮ ಬ್ರ್ಯಾಂಡ್ ಇನ್ನೂ ಇದೆ.
ಯುಕೆ ಮಾರುಕಟ್ಟೆಗಳಲ್ಲಿ 7,000 ರೆಸ್ಟೋರೆಂಟ್‌ಗಳು, ನೂರಾರು ಸೂಪರ್‌ಮಾರ್ಕೆಟ್‌ಗಳಲ್ಲಿ ತನ್ನ ನೆಲೆಯನ್ನು ಕಂಡುಕೊಂಡಿರುವ ಈ ಬಿಯರ್ 40 ದೇಶಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ನಾವು ಲಾಭದಲ್ಲಿದ್ದೇವೆ, ನಮ್ಮ ಬ್ರ್ಯಾಂಡ್ನ್ನು ನಾನು ಈಗ ಮತ್ತೆ ಪ್ರಾರಂಭಿಸಲು ಕಾಯುತ್ತಿದ್ದೇನೆ ಎಂದು ಉದ್ಯಮಿಯು ತಿಳಿಸಿದ್ದಾರೆ.