ಉಪ್ಪಳ: ಕರಾವಳಿ ಭಾಗದಲ್ಲಿ ಕಡಲ್ಕೊರೆತತೀವ್ರಗೊಂಡಿದ್ದು ಹೈವೋಲ್ಟೇಜ್ ವಿದ್ಯುತ್ ಕಂಬ ಕಡಲಪಾಲಾದ ಘಟನೆ ಪೆರಿಂಗಡಿಯಲ್ಲಿ ನಡೆದಿದೆ.
ಕಡಲ ಬದಿ ಹಾಕಲಾದ ವಿದ್ಯುತ್ ಕಂಬಗಳಿಗೆ ಹಾನಿಯಾಗುವ ಬಗ್ಗೆ ಸ್ಥಳೀಯರು ಈ ಮೊದಲೇ ಅಧಿಕೃತರಿಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಈ ಮಧ್ಯೆ ಭಾನುವಾರ ರಾತ್ರಿ ಹೆದ್ದರೆಗಳ ಬಡಿತಕ್ಕೆ ಕಂಗಗಳು ಧರಾಶಾಯಿಯಾದವು. ಸ್ಥಳೀಯರ ಸೂಚನೆಯ ಬಳಿಕ ಇಲಾಖೆಯ ಅಧಿಕೃತರು ಆಗಮಿಸಿ ಸಂಪರ್ಕ ಕಡಿತಗೊಳಿಸಿದರು.