ದಾರ್ ಎಸ್ ಸಲಾಮ್ (PTI): 'ಬೇರೆ ದೇಶಗಳಂತೆ ಭಾರತವು ಸಂಪನ್ಮೂಲಭರಿತ ಆಫ್ರಿಕಾ ಖಂಡದಲ್ಲಿ ಸುಲಿಗೆ ಆಧರಿತ ಆರ್ಥಿಕ ಚಟುವಟಿಕೆ ಕೈಗೊಂಡಿಲ್ಲ ಮತ್ತು ಇಲ್ಲಿ ಸಂಕುಚಿತ ಆರ್ಥಿಕ ಚಟುವಟಿಕೆ ಉತ್ತೇಜನ ನೀಡುತ್ತಿಲ್ಲ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.
ದಾರ್ ಎಸ್ ಸಲಾಮ್ (PTI): 'ಬೇರೆ ದೇಶಗಳಂತೆ ಭಾರತವು ಸಂಪನ್ಮೂಲಭರಿತ ಆಫ್ರಿಕಾ ಖಂಡದಲ್ಲಿ ಸುಲಿಗೆ ಆಧರಿತ ಆರ್ಥಿಕ ಚಟುವಟಿಕೆ ಕೈಗೊಂಡಿಲ್ಲ ಮತ್ತು ಇಲ್ಲಿ ಸಂಕುಚಿತ ಆರ್ಥಿಕ ಚಟುವಟಿಕೆ ಉತ್ತೇಜನ ನೀಡುತ್ತಿಲ್ಲ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.
ತಾಂಜಾನಿಯಾ ಪ್ರವಾಸದಲ್ಲಿರುವ ಅವರು ಝಿಂಝಿಬಾರ್ ಭೇಟಿ ಬಳಿಕ ಗುರುವಾರ ದರ್-ಎಸ್-ಸಲಾಂ ನಗರದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.
'ಭಾರತೀಯ ಸಮುದಾಯದ ಸದಸ್ಯರ ಜೊತೆ ಮಾತುಕತೆ ನಡೆಸಿದೆ. ಐಟಿ (ಇಂಡಿಯಾ ಮತ್ತು ತಾಂಜಾನಿಯಾ) ಯೋಜನೆಯ ಮಹತ್ವವನ್ನು ಅವರಿಗೆ ವಿವರಿಸಿದೆ. ಭಾರತ ಮತ್ತು ಆಫ್ರಿಕಾದ ನಿಕಟ ಸಂಬಂಧದ ಕುರಿತು ಒತ್ತಿ ಹೇಳಿದೆ. ಭಾರತೀಯ ಸಮುದಾಯವು ಈ ದ್ವಿಪಕ್ಷೀಯ ಸಂಬಂಧದ ಅಭಿವ್ಯಕ್ತಿ, ಕೊಡುಗೆದಾರ ಮತ್ತು ಶಕ್ತಿಯಾಗಿದೆ ಎಂದು ಅವರಿಗೆ ಹೇಳಿದೆ. ಭಾರತ ಮತ್ತು ತಾಂಜಾನಿಯಾದ ದ್ವಿಪಕ್ಷೀಯ ಸ್ನೇಹವು ಇಲ್ಲಿಯ ಜನಜೀವನದಲ್ಲಿ ಹೇಗೆ ಬದಲಾವಣೆ ತರುತ್ತಿದೆ ಎಂಬುದನ್ನು ವಿವರಿಸಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
'ಇಂದು ನಾವು ಆಫ್ರಿಕಾ ಅಭಿವೃದ್ಧಿ ಹೊಂದುವುದನ್ನು ನೋಡಲು ಬಯಸುತ್ತೇವೆ. ಆಫ್ರಿಕಾದೊಂದಿಗೆ ಹೆಚ್ಚು ವ್ಯಾಪಾರ ಮಾಡುವುದು, ಹೂಡಿಕೆ ಮಾಡುವುದು, ಸಾಮರ್ಥ್ಯಗಳನ್ನು ಸೃಷ್ಟಿಸುವುದು ಆಗಿದೆ. ಇದರಿಂದಾಗಿ ಏಷ್ಯಾದಲ್ಲಿ ಭಾರತದಂತಹ ದೇಶ ಅಭಿವೃದ್ಧಿ ಹೊಂದುತ್ತಿರುವಂತೆ ಆಫ್ರಿಕ ಸಹ ಪ್ರಗತಿ ಹೊಂದಬೇಕು' ಎಂದು ಹೇಳಿದ್ದಾರೆ.
ಯುದ್ಧ ಸ್ಮಾರಕಕ್ಕೆ ಭೇಟಿ: ಜೈಶಂಕರ್ ಅವರು ದಾರ್-ಎಸ್-ಸಲಾಂನಲ್ಲಿಯ ಕಾಮನ್‌ವೆಲ್ತ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಮೊದಲ ವಿಶ್ವಯುದ್ಧದಲ್ಲಿ ಮಡಿದ ಭಾರತೀಯ ಯೋಧರಿಗೆ ಗೌರವ ಸಲ್ಲಿಸಿದರು.
'ಕಾಮನ್‌ವೆಲ್ತ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಭಾರತೀಯ ಯೋಧರಿಗೆ ಗೌರವ ಸಲ್ಲಿಸಿದೆ. ಹಲವಾರು ಯುದ್ಧಭೂಮಿಗಳಲ್ಲಿ ನಮ್ಮವರ ಬಲಿದಾನವು ನಮ್ಮ ಇತಿಹಾಸದ ಪ್ರಮುಖ ಅಂಶವಾಗಿದೆ. ಜಾಗತಿಕವಾಗಿ ಭಾರತ ಬೀರಿರುವ ಪರಿಣಾಮವನ್ನು ಇದು ತೋರುತ್ತದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.