ಚಂಡೀಗಢ: ಹರಿಯಾಣದ ಸೋನಿಪತ್ ಜಿಲ್ಲೆಗೆ ಶನಿವಾರ ಬೆಳಿಗ್ಗೆ ತೆರಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗ್ರಾಮಸ್ಥರನ್ನು ಭೇಟಿಯಾಗಿದ್ದಾರೆ.
ಚಂಡೀಗಢ: ಹರಿಯಾಣದ ಸೋನಿಪತ್ ಜಿಲ್ಲೆಗೆ ಶನಿವಾರ ಬೆಳಿಗ್ಗೆ ತೆರಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗ್ರಾಮಸ್ಥರನ್ನು ಭೇಟಿಯಾಗಿದ್ದಾರೆ.
ಸೋನಿಪತ್‌ಗೆ ದಿಢೀರ್ ಭೇಟಿ ನೀಡಿರುವ ರಾಹುಲ್ ಗಾಂಧಿ, ರೈತರೊಂದಿಗೆ ಭತ್ತ ಬಿತ್ತನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಜಗಬೀರ್ ಸಿಂಗ್ ಮಲಿಕ್ ತಿಳಿಸಿದ್ದಾರೆ.
ದೆಹಲಿಯಿಂದ ಹಿಮಾಚಲ ಪ್ರದೇಶಕ್ಕೆ ಹೋಗುವ ವೇಳೆ ರಾಹುಲ್ ಹರಿಯಾಣದ ಸೋನಿಪತ್‌ಗೆ ಭೇಟಿ ನೀಡಿ ರೈತರನ್ನು ಭೇಟಿಯಾಗಿ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ.
ಇತ್ತೀಚೆಗೆ ಟ್ರಕ್ ಚಾಲಕರ ಸಮಸ್ಯೆಗಳನ್ನು ಅರಿತುಕೊಳ್ಳಲು ರಾಹುಲ್ ಗಾಂಧಿ ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್‌ನಲ್ಲಿ ಪ್ರಯಾಣಿಸಿದ್ದರು.