ಕಾಸರಗೋಡು: ಮಡಿಕೈ ಗ್ರಾಮ ಪಂಚಾಯಿತಿ ಕೃಷಿ ಭವನದಲ್ಲಿ ಕೃಷಿಕರ ಸಮಾವೇಶ ಮತ್ತು ನಾಟಿ ಮಾರುಕಟ್ಟೆ ಕಾರ್ಯಕ್ರಮ ಮಡಿಕೈ ಕೃಷಿ ಭವನ ವಠಾರದಲ್ಲಿ ಜರುಗಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಪ್ರೀತಾ ಸಮರಂಭ ಉದ್ಘಾಟಿಸಿದರು. ಉಪಾಧ್ಯಕ್ಷ ವಿ.ಪ್ರಕಾಶನ್ ಅಧ್ಯಕ್ಷತೆ ವಹಿಸಿದ್ದರು.
ಕೃಷಿ ಅಧಿಕಾರಿ ಅರವಿಂದನ್ ಕೊಟ್ಟಾರತ್ತಿಲ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ತರಕಾರಿ ಮೊಳಕೆ,ಬೀಜ ವಿತರಣಾಕರ್ಯ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ರಾಜ್ಯ ಯಾಂತ್ರೀಕರಣ ಮಿಷನ್ ಯೋಜನೆಯನ್ವಯ ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವ ನೋಂದಣಿ ಶಿಬಿರವನ್ನು ನಡೆಸಲಾಯಿತು. ರೈಡ್ಕೋ ಸಂಸ್ಥೆ ವ್ಯವಸ್ಥಾಪಕ ಬಿ.ಕೆ.ಸುರೇಶನ್ ಯೋಜನೆಯ ಮಾಹಿತಿಯನ್ನು ವಿವರಿಸಿದರು. ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸತ್ಯ, ಟಿ.ರಾಜನ್, ರಮಾಪದ್ಮನಾಭನ್, ಪಂಚಾಯಿತಿ ಸದಸ್ಯರಾದ ಎನ್.ಬಾಲಕೃಷ್ಣನ್, ಕೆ.ವಿ.ಪ್ರಮೋದ್, ಟಿ.ರತೀಶ್, ಎ.ಶೈಲಜಾ, ಸಹಾಯಕ ಕೃಷಿ ಅಧಿಕಾರಿ ಪಿ.ವಿ.ಪವಿತ್ರನ್, ಕೃಷಿ ಸಹಾಯಕರಾದ ಪಿ.ವಿ.ನಿಶಾಂತ್, ಸಜಿತಾ ಮಣಿಯರ ಉಪಸ್ಥಿತರಿದ್ದರು.