ಮುಳ್ಳೇರಿಯ: ದೀರ್ಘಕಾಲದಿಂದ ಅಸೌಖ್ಯ ಬಾಸಿ ಚಿಕಿತ್ಸೆಯಲಿರುವ ಕಾರಡ್ಕ ಪಂಚಾಯಿತಿ ಶಾಂತಿನಗರ -ಚೆನ್ನಂಗೋಡು ನಿವಾಸಿ ಆನಂದ ಸಿ ಎಚ್ ಎಂಬವರಿಗೆ ಭಾರತೀಯ ಜನತಾ ಪಕ್ಷದ ಮಾರಾರ್ಜಿ ಟ್ರಸ್ಟ್ ವತಿಯಿಂದ ತಾವರೆ ನೆರಳು ಯೋಜನೆಯಲ್ಲಿ ಚಿಕಿತ್ಸಾ ಸಹಾಯ ನಿಧಿಯನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲ ಕುಟ್ಟಿ ಹಸ್ತಾಂತರಿಸಿದರು. ಪಕ್ಷದ ಕಾರಡ್ಕ ಪಂಚಾಯಿತಿ ಸಮಿತಿ ಅಧ್ಯಕ್ಷ ವಸಂತ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವಕೀಲ ಕೆ. ಶ್ರೀಕಾಂತ್, ರವೀಶ ತಂತ್ರಿ ಕುಂಟಾರು, ಸುರೇಶ್ ಕುಮಾರ್ ಶೆಟ್ಟಿ, ಪ್ರಮೀಳಾ ಸಿ ನಾಯ್ಕ್, ಅಶ್ವಿನಿ ಯಂ ಎಲ್, ಸುಧಾಮ ಗೋಸಾಡ, ಜನನಿ ಎಂ., ಶಿವಕೃಷ್ಣ ಭಟ್, ವಕೀಲ ಗೋಪಾಲಕೃಷ್ಣ ಭಟ್, ಪಿ ಆರ್ ಸುನಿಲ್, ರತ್ನಾಕರ, ಗಿರೀಶ್ ಪಾಣೂರು ನೇತೃತ್ವ ವಹಿಸಿದ್ದರು. ಚಂದು ಮಾಸ್ತರ್ ಸ್ವಾಗತಿಸಿ, ಗೋಪಾಲಕೃಷ್ಣ ಮುಂಡೋಲುಮೂಲೆ ವಂದಿಸಿದರು.