ಪೆರ್ಲ : ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಹಾಗೂ ಗ್ರಾಮ ವಿಕಾಸ ಯೋಜನೆ ಸಹಯೋಗದಲ್ಲಿ ವಿವೇಕಾನಂದ ಶಿಶುಮಂದಿರ ವಠಾರದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶಿಶುಮಂದಿರ ಸಮಿತಿ ಅಧ್ಯಕ್ಷೆ ನಳಿನಿ ಸೈಪಂಗಲ್ಲು, ನಾಲಂದ ಕಾಲೇಜು ಅಡಳಿತ ಸಮಿತಿ ಸದಸ್ಯ ರಾಜಶೇಖರ ಪೆರ್ಲ, ಪ್ರಾಂಶುಪಾಲ ಸುರೇಶ್ ಕೆ.ಎಂ., ಸ್ಟುಡೆಂಡ್ ವೆಲ್ ಫೇರ್ ಆಫೀಸರ್ ಕೇಶವ ಶರ್ಮ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರ ಕೆ., ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರಜಿತ್, ಗ್ರಾಮ ವಿಕಾಸ ಯೋಜನಾಧಿಕಾರಿ ಶ್ರೀನಿಧಿ ಕೆ., ಉಪನ್ಯಾಸಕ ಸಿಬ್ಬಂದಿ ವರ್ಗದವರು ಭಾಗವಹಿಸಿದರು. ಈ ಸಂದರ್ಭ ನಾನಾ ಪ್ರಬೇಧಗಳ ಸಸ್ಯಗಳನ್ನು ನೆಡಲಾಯಿತು.