ಮಧೂರು: ಸಿರಿಬಾಗಿಲು ಗ್ರಾಮದ ಪುಳ್ಕೂರು ಕ್ಷೇತ್ರದ ಸನಿಹದಲ್ಲಿರುವ ಕಂಪದಮೂಲೆ ಎಂಬಲ್ಲಿ ವಾಸಿಸುವ ಪರಮೇಶ್ವರ(ಕುಟ್ಟ )ಎಂಬವರು ಕಳೆದ ಹಲವು ತಿಂಗಳಿನಿಂದ ಕಾಲಿಗೆ ತಾಗಿದ ಗಾಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಇದೀಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ .ಕಾಲು ಹಾಗೂ ಹೊಟ್ಟೆಯಲ್ಲಿ ನೀರು ತುಂಬಿಕೊಂಡು ಹೊಟ್ಟೆ ಉಬ್ಬರಿಸಿದ್ದು, ಕಾಲು ಊತ ಬಂದು ನಡೆಯಲಾರದ ಪರಿಸ್ಥಿತಿಯಲ್ಲಿದ್ದಾರೆ.
ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದ ಈ ಬಡ ಕುಟುಂಬಕ್ಕೆ ಚಿಕಿತ್ಸಾ ವೆಚ್ಚವನ್ನು ಭರಿಸುವ ಸಾಮಥ್ರ್ಯ ಇಲ್ಲದಿರುವ ಕಾರಣ ಸಿರಿಬಾಗಿಲು ಗ್ರಾಮದ ನಮಸ್ತೆ ವಾಟ್ಸಪ್ ಗ್ರೂಪಿನ ಸದಸ್ಯರು ಸಹಾಯಧನವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಕಳೆದ ಹಲವಾರು ದಿನಗಳಿಂದ ಪ್ರತ್ಯೇಕ ಅಭಿಯಾನವನ್ನು ನಡೆಸಿತ್ತು. ಸಂಗ್ರಹಗೊಂಡ ಮೊತ್ತವನ್ನು ಪರಮೇಶ್ವರ ಅವರ ಮನೆಗೆ ತೆರಳಿ ತಂಡದ ಸದಸ್ಯರು ಹಸ್ತಾಂತರಿಸಿದರು. ಅಭಿಯಾನದ ಮೂಲಕ 25000 ರೂ. ಮೊತ್ತ ಈ ಅಭಿಯಾನದ ಮೂಲಕ ಸಂಗ್ರಹಿಸಲಾಗಿತ್ತು. ಇದಕ್ಕೆ ಸ್ಪಂಧಿಸಿದ ಎಲ್ಲಾ ನಮಸ್ತೆ ವಾಟ್ಸಪ್ ಗ್ರೂಪಿನ ಸದಸ್ಯರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.