ಕಾಸರಗೋಡು: ಅಪರ ಜಿಲ್ಲಾಧಿಕಾರಿಯಾಗಿ ದಿಲೀಪ್ ಕೆ ಕೈನಿಕರ ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ. 2022 ರ ಬ್ಯಾಚ್‍ನಲ್ಲಿ 21 ನೇ ರ್ಯಾಂಕ್ ವಿಜೇತರಾಗಿ ರಾಜ್ಯಕ್ಕೆ ಅಗ್ರಸ್ಥಾನ ಪಡೆದಿದ್ದರು.
ತರಬೇತಿ ನಂತರ ಜುಲೈ 6 ರಂದು ಕಾಸರಗೋಡಿನ ಅಪರ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕೊಟ್ಟಾಯಂನ ಚಂಗನಾಶ್ಶೇರಿ ನಿವಾಸಿಯಾಗಿರುವ ಇವರು ಮದ್ರಾಸ್ ಐ.ಐ.ಟಿ ಯಿಂದ 2015 ರ ಬ್ಯಾಚ್‍ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ.