ಬದಿಯಡ್ಕ: ಆಟಿ ಅಮವಾಸ್ಯೆಯ ಅಂಗವಾಗಿ ಬದಿಯಡ್ಕ ಶ್ರೀನಿಧಿ ಕ್ಲಿನಿಕ್ ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಹಾಲೆ ಮರದ ಕೆತ್ತೆಯ ಕಷಾಯ ವಿತರಣೆ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಡಾ.ಶ್ರೀನಿಧಿ ಸರಳಾಯ ಅವರು ಮಾತನಾಡಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಅಲ್ಲದೆ ಅಗಲಿದ ರವಿಕಾಂತ ಕೇಸರಿ ಕಡಾರು, ಅರವಿಂದ ಅಲೆವೂರಾಯ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಕಾರ್ಯಕ್ರಮವನ್ನು ಅವರಿಗೆ ಅರ್ಪಣೆ ಮಾಡಲಾಯಿತು. ಮೈರ್ಕಳ ನಾರಾಯಾಣ ಮಾಸ್ತರ್ ಉದ್ಘಾಟಿಸಿದರು. ವಿಶ್ವನಾಥ ಬಾರಡ್ಕ, ಶ್ರೀಶನ್ ಬಾರಡ್ಕ ಕಾರ್ಯಕ್ರಮಕ್ಕೆ ಕೈಜೋಡಿಸಿದರು. ಶ್ರೀಶನ್ ಬಾರಡ್ಕ ಅವರಿಗೆ ಗೋಪಾಲಕೃಷ್ಣ ಅವರು ಸ್ಮರಣಿಕೆ ನೀಡಿ ಗೌರವಿಸಿದರು. ಡಾ.ಬೆ.ಸಿ.ಗೋಪಾಲಕೃಷ್ಣ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಸಹಿತ ಹಲವರಿಗೆ ಕಷಾಯ ನೀಡಲಾಯಿತು. ರಾಘವೇಂದ್ರ ಅಮ್ಮಣ್ಣಾಯ, ಪ್ರಸಾದ್ ಮೈರ್ಕಳ ಸಹಿತ ಗಣ್ಯರು ಉಪಸ್ಥಿತರಿದ್ದರು. 300 ಕ್ಕೂ ಹೆಚ್ಚು ಮಂದಿ ಸದುಪಯೋಗಪಡಿಸಿಕೊಂಡಿದ್ದಾರೆ. ಕಳೆದ 13 ವರ್ಷಗಳಿಂದ ಬದಿಯಡ್ಕ ಶ್ರೀನಿಧಿ ಕ್ಲಿನಕ್ ನಲ್ಲಿ ಆಟಿ ಅಮವಾಸ್ಯೆ ದಿನದಂದು ಹಾ(ಪಾ)ಲೆ ಮರದ ಉಚಿತ ಕಷಾಯ ವಿತರಣೆ ನಡೆಯುತ್ತಿದೆ.