ಎರ್ನಾಕುಳಂ: ಅಂಗಮಾಲಿ ಎಂಎಜಿಜೆ ಆಸ್ಪತ್ರೆಯಲ್ಲಿ ಮಹಿಳೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ರೋಗಿಯ ಜೊತೆ ಉಳಿದುಕೊಳ್ಳಲು ಬಂದ ಯುವತಿಯನ್ನು ಮಾಜಿ ಸ್ನೇಹಿತ ಕೊಂದಿದ್ದಾನೆ.
ಮುಕನ್ನೂರಿನ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ರೋಗಿಯೊಬ್ಬರಿಗೆ ಚಿಕಿತ್ಸೆ ಸಹಾಯಕಳಾಗಿ ಬಂದ ಲಿಜಿ (40) ಎಂಬ ಯುವತಿಯನ್ನು ಆಕೆಯ ಮಾಜಿ ಸ್ನೇಹಿತ ಮಹೇಶ್ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಆರೋಪಿ ಮಹೇಶ್ ನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಮಹೇಶ್ ಲಿಜಿಯನ್ನು ನೋಡಲು ಆಸ್ಪತ್ರೆಗೆ ಬಂದಾಗ ಮಹಿಳೆಯೊಂದಿಗೆ ಮಾತಿನ ಚಕಮಕಿ ನಡೆಸಿ ನಂತರ ಚಾಕುವಿನಿಂದ ಇರಿದಿದ್ದಾನೆ. ಓಡಿಹೋಗಲು ಯತ್ನಿಸಿದ ಲಿಜಿಯನ್ನು ಹಿಂಬಾಲಿಸಿದ ಮಹೇಶ್, ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಲಿಜಿಯ ಕಿರುಚಾಟ ಕೇಳಿ ಧಾವಿಸಿದ ನೌಕರರು ಮಹೇಶ್ ನನ್ನು ತಡೆಯಲು ಯತ್ನಿಸಿದರಾದರೂ ಆರೋಪಿಗಳು ಅವರ ಮೇಲೆ ಚಾಕು ಎಸೆದಿದ್ದಾರೆ. ಆಸ್ಪತ್ರೆಯಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಇತರರ ನೆರವಿನಿಂದ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.