ಸೋಶಿಯಲ್ ಮಿಡಿಯಾ ಬಂದ್ಮೇಲೇ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಸೋಶಿಯಲ್ ಮಿಡಿಯಾದಲ್ಲೇ ಸಮಯ ಕಳೆಯುತ್ತಾರೆ. ಪ್ರತಿಯೊಬ್ಬರು ಒಂದೊಂದು ಅಕೌಂಟ್ ಮಾಡ್ಕೊಂಡು ದಿನ ನಿತ್ಯ ನಡೆಯೋ ಪ್ರತಿಯೊಂದು ಚಟುವಟಿಕೆಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಅಪ್ಡೇಟ್ ಮಾಡ್ತಾನೆ ಇರ್ತಾರೆ. ಇಷ್ಟು ಸಾಲದು ಅಂತ ಪುಟ್ಟ ಮಕ್ಕಳಿಗಾಗಿ ಹೊಸ ಅಕೌಂಟ್ ಕ್ರಿಯೇಟ್ ಮಾಡಿ ಅದನ್ನು ಎಲ್ಲರಿಗೂ ಕಾಣುವಂತೆ ಪಬ್ಲಿಕ್ ಮಾಡಿಟ್ಟುರುತ್ತಾರೆ.
ಈ ಮಕ್ಕಳ ಅಕೌಂಟ್ ನಲ್ಲಿ ಮಕ್ಕಳ ಪ್ರತಿಯೊಂದು ಚಟುವಟಿಕೆಯ ಬಗ್ಗೆ ಕೂಡ ಅಪ್ಡೇಟ್ ಮಾಡ್ತಾರೆ. ಮಗು ಏನು ತಿನ್ನುತ್ತೆ? ಏನು ಕುಡಿಯುತ್ತೆ? ಹೀಗೆ ಪ್ರತಿಯೊಂದು ವಿಚಾರವನ್ನು ಇಲ್ಲಿ ಹಂಚಿಕೊಳ್ಳಲಾಗುತ್ತದೆ. ಮಗುವಿನ ಫೋಟೋಗೆ ಲೈಕ್, ಕಾಮೆಂಟ್ ಹಾಗೂ ಲಕ್ಷ ಲಕ್ಷ ಜನ ಫಾಲೋವರ್ಸ್ ಆದಾಗ ಪೋಷಕರಿಗೆ ತುಂಬಾನೇ ಖುಷಿಯಾಗುತ್ತದೆ. ಆದ್ರೆ ಇದರಿಂದ ಭವಿಷ್ಯದಲ್ಲಿ ಬಹುದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ. ಅಷ್ಟಕ್ಕು ಇದರಿಂದ ಮಕ್ಕಳಿಗೆ ಯಾವ ರೀತಿ ಅಪಾಯ ಆಗುತ್ತೆ ಅನ್ನೋದನ್ನು ತಿಳಿಯೋಣ.ಮಕ್ಕಳ ವೈಯಕ್ತಿಕ ವಿಚಾರವನ್ನು ಹಂಚಿಕೊಳ್ಳುವುದು
ಹಣ ಹಾಗೂ ಹೆಸರು ಮಾಡೋ ಉದ್ದೇಶದಿಂದ ಪೋಷಕರಿಗೂ ಸೋಶಿಯಲ್ ಮೀಡಿಯಾ ಗೀಳು ಹತ್ತಿದೆ. ಹೀಗಾಗಿ ಮಕ್ಕಳನ್ನು ಸೋಶಿಯಲ್ ಮಿಡಿಯಾದ ಮುದೆ ತಂದು ಪೋಷಕರು ಅವರ ವೈಯಕ್ತಿಕ ವಿಚಾರವನ್ನು ಶೇರ್ ಮಾಡ್ತಿದ್ದಾರೆ. ಅವರ ದಿನಚರಿಯಿಂದ ಹಿಡಿದು ಆಸ್ಪತ್ರೆ, ಶಾಲೆ ಹೀಗೆ ಅವರು ಎಲ್ಲಿ ಹೋದ್ರು ಅದನ್ನು ವ್ಲೋಗ್ ಮಾಡಿ. ಆ ಮಾಹಿತಿಯನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾಗ್ತಿದೆ. ಇದು ಬಹುದೊಡ್ಡ ಅಪಾಯ.
ಇದರಿಂದ ಮಕ್ಕಳಿಗೆ ವೈಯಕ್ತಿ ಬದುಕು ಇಲ್ಲದಂತಾಗುತ್ತದೆ. ಅವರು ಕೊಂಚ ದೊಡ್ಡವರಾದ ಮೇಲೆ ಅವರು ಎಲ್ಲಿ ಹೋದ್ರು ಜನ ಅವರನ್ನು ಗುರುತಿಸಿ ಮಾತನಾಡುವುದು ಕಿರಿಕಿರಿ ಅನ್ನಿಸಬಹುದು. ಜೊತೆಗೆ ಅವರ ಖಾಸಗಿ ಬದುಕಿಗೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಕಿಡಿಗೇಡಿಗಳು ಇದರ ಪ್ರಯೋಜನ ಪಡ್ಕೊಂಡ್ರು ಅನುಮಾನವಿಲ್ಲ.
ಮಾಹಿತಿ ಸೈಬರ್ ಕಳ್ಳರ ಕೈ ಸೇರುತ್ತದೆ
"ಶೇರೆಂಟಿಂಗ್" ಈ ಆಧುನಿಕ ಯುಗದಲ್ಲಿ ಜನ ವೈಯಕ್ತಿಕ ಮಾಹಿತಿ ಬಗ್ಗೆ ಹೆಚ್ಚು ಗಮನ ಕೊಡ್ತಿಲ್ಲ ಅನ್ನಿಸುತ್ತೆ. ಹೀಗಾಗಿ ಮನಬಂದಂತೆ ಪೋಷಕರು ತಮ್ಮ ಜೊತೆಗೆ ತಮ್ಮ ಮಕ್ಕಳ ಮಾಹಿತಿಯನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚುತ್ತಿದ್ದಾರೆ. ಈಗಾಗಲೇ ಈ ಅಪಾಯದ ಬಗ್ಗೆ ಪಶ್ಚಿಮ ಬಂಗಾಲದ ಪೋಲಿಸರು ಮಾಹಿತಿಯನ್ನು ನೀಡಿದ್ದಾರೆ. ನಿಮ್ಮ ಹಾಗೂ ಮಕ್ಕಳ ವೈಯಕ್ತಿಕ ಮಾಹಿತಿಗಳು ಸೈಬರ್ ಕಳ್ಳರ ಕೈ ಸೇರುತ್ತಿದೆ. ಇದರಿಂದ ಮುಂದೆ ಡಿಜಿಟಲ್ ಕಿಡ್ನಪಿಂಗ್ ನಂತಹ ಅಪಾಯಗಳು ಕೂಡ ಹೆಚ್ಚಾಗಿದೆ.
ಮಕ್ಕಳಿಗೆ ವೈಯಕ್ತಿಕ ಸ್ಥಳ ಬೇಕಾಗುತ್ತದೆ
ಪೋಷಕರು ತಮ್ಮ ಮಕ್ಕಳ ಫೋಟೋ ಅಥವಾ ವೈಯಕ್ತಿಕ ಮಾಹಿತಿಯನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡುವಾಗ ಕೆಲವು ವಿಚಾರಗಳ ಬಗ್ಗೆ ಯೋಚನೆ ಮಾಡೋದಿಲ್ಲ. ಈಗ ನಿಮ್ಮ ಮಗುವಿನ ಫೋಟೋಗೆ ಲೈಕ್, ಕಾಮೆಂಟ್ ಬಂದಾಗ ಖಷಿಯಾಗಬಹುದು. ಆದರೆ ಮಗು ದೊಡ್ಡದಾಗುತ್ತಿದಂತೆ ಈ ವಿಚಾರ ಬಗ್ಗೆ ಆ ಮಗುವಿಗೆ ತಿಳಿಯುತ್ತೆ. ಸೋಶಿಯಲ್ ಮಿಡಿಯಾದಲ್ಲಿ ಈ ರೀತಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದು ಆ ಮಗುವಿಗೆ ಇಷ್ಟ ಇಲ್ಲದೇ ಇರಬಹುದು. ಹೀಗಾಗಿ ಇದು ಸೂಕ್ಷ್ಮ ವಿಚಾರ ಆಗಿರೋದ್ರಿಂದ ಈ ಬಗ್ಗೆ ಎಚ್ಚರ ವಹಿಸೋದು ತುಂಬಾನೇ ಒಳ್ಳೆಯದು.
ಮಕ್ಕಳ ಫೋಟೋ ಮಿಸ್ ಯೂಸ್ ಆಗ್ಬಹುದು
ಪೋಷಕರು ಮಕ್ಕಳ ಸುಂದರವಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತೀರಿ. ಆದರೆ ಅದರಿಂದ ಆಗುವ ಅಪಾಯದ ಬಗ್ಗೆ ನಿಮಗೆ ಅರಿವಿದ್ಯಾ? ಇತ್ತೀಚಿನ ಕಾಲದಲ್ಲಿ ಪ್ರತಿಯೊಂದು ಮಾಹಿತಿಯನ್ನು ಕಳ್ಳರು ಕದಿಯುತ್ತಾರೆ. ಅಂತದ್ರಲ್ಲಿ ನಿಮ್ಮ ಮಗುವಿನ ಫೋಟೋವನ್ನು ಕದ್ದು ಅದನ್ನು ಮಿಸ್ ಯೂಸ್ ಮಾಡಿಕೊಂಡ್ರೆ ಏನು ಗತಿ. ಹೀಗಾಗಿ ಈ ಬಗ್ಗೆ ಯೋಚಿಸೋದು ತುಂಬಾನೇ ಮುಖ್ಯ.
ಮಕ್ಕಳ ಫೋಟೋವನ್ನು ಸೋಶಿಯಲ್ ಮಿಡಿಯಾದ ಶೇರ್ ಮಾಡೋದು ತಪ್ಪು ಅಂತ ಹೇಳುತ್ತಿಲ್ಲ. ಆದರೆ ಪೋಷಕರಾಗಿ ನಿಮಗೆ ಈ ಬಗ್ಗೆ ಅರಿವಿರಲೇಬೇಕು. ಮಕ್ಕಳಿಗೆ ಸರಿ-ತಪ್ಪನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲದಿದ್ದರೂ ಕೂಡ ಪೋಷಕರಾಗಿ ನಿಮಗೆ ಈ ಬಗ್ಗೆ ತಿಳಿದಿರುವಾಗ ಯಾವುದೇ ಕಾರಣಕ್ಕೂ ತಪ್ಪು ಆಗದಂತೆ ಎಚ್ಚರಿಕೆ ವಹಿಸಿ.