ಚೆನ್ನೈ: ದೇಶದ ಹಲವೆಡೆ ಟೊಮೆಟೊ ದರ ಕೆ.ಜಿಗೆ ₹ 150 ತಲುಪಿದ್ದು, ತಮಿಳುನಾಡು ಸರ್ಕಾರ ಪಡಿತರ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮೆಟೊ ವಿತರಣೆ ಆರಂಭಿಸಿದೆ.
ಚೆನ್ನೈ: ದೇಶದ ಹಲವೆಡೆ ಟೊಮೆಟೊ ದರ ಕೆ.ಜಿಗೆ ₹ 150 ತಲುಪಿದ್ದು, ತಮಿಳುನಾಡು ಸರ್ಕಾರ ಪಡಿತರ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮೆಟೊ ವಿತರಣೆ ಆರಂಭಿಸಿದೆ.
ಪಡಿತರ ಅಂಗಡಿಗಳಲ್ಲಿ ಟೊಮೆಟೊ ಕೆ.ಜಿಗೆ ₹ 60 ಎಂದು ಫಲಕ ಕೂಡ ಹಾಕಲಾಗಿದೆ.
'ಇಂದಿನಿಂದ ಪಡಿತರ ಅಂಗಡಿಗಳಲ್ಲಿ ಕೆ.ಜಿಗೆ ₹ 60ರ ಹಾಗೆ ಟೊಮೆಟೊಗಳು ಸಿಗುತ್ತವೆ. ಮಾರುಕಟ್ಟೆಯಲ್ಲಿ ₹ 100-130 ಇದೆ. ಅರ್ಧ ದರದಲ್ಲಿ ಸರ್ಕಾರ ಟೊಮೆಟೊ ಮಾರಾಟ ಮಾಡಲು ಪ್ರಾರಂಭಿಸಿದ್ದು ಖುಷಿಯಾಗಿದೆ. ಇಂಥ ಉಪಕ್ರಮ ತೆಗೆದುಕೊಂಡ ಸರ್ಕಾರಕ್ಕೆ ಧನ್ಯವಾದಗಳು' ಎಂದು ಟೊಮೆಟೊ ಖರೀದಿ ಮಾಡಿದ ಬೇಬಿ ಎನ್ನುವ ಮಹಿಳೆ ಸಂತಸ ವ್ಯಕ್ತಪಡಿಸಿದರು.
ಹವಾಮಾನ ವೈಪರೀತ್ಯ, ರೋಗ ಸೇರಿ ಹಲವು ಕಾರಣಗಳಿಂದಾಗಿ ಟೊಮೆಟೊ ದರ ನೂರು ದಾಟಿದೆ.