ಆಧಾರ್-ಪ್ಯಾನ್ ಲಿಂಕ್ ಮಾಡುವ ಗಡುವು ಮುಗಿದಿದೆ. ಲಿಂಕ್ ಮಾಡಲು ಕೊನೆಯ ದಿನಾಂಕ ನಿನ್ನೆ ಜೂನ್ 30 ಕ್ಕೆ ಕೊನೆಗೊಂಡಿದೆ.
ಜೂನ್ 30 ರ ಬಳಿಕ, ಸಮಯ ಮಿತಿಯನ್ನು ವಿಸ್ತರಿಸಲಾಗಿದೆ ಎಂದು ಯಾವುದೇ ಪ್ರಕಟಣೆ ಈವರೆಗೆ ಬಂದಿಲ್ಲ.
ಆಧಾರ್‍ನೊಂದಿಗೆ ಲಿಂಕ್ ಮಾಡದ ಎಲ್ಲಾ ಪ್ಯಾನ್ ಕಾರ್ಡ್‍ಗಳು ಜುಲೈ 1 ರಿಂದ ನಿಷ್ಕ್ರಿಯಗೊಳ್ಳುತ್ತವೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ತಿಳಿಸಿದೆ. ಪ್ಯಾನ್ ಅನ್ನು ಆಧಾರ್‍ನೊಂದಿಗೆ ಲಿಂಕ್ ಮಾಡದಿದ್ದರೆ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಜೊತೆಗೆ, ಅನೇಕ ಪರಿಣಾಮಗಳು ಉಂಟಾಗುತ್ತವೆ.
ನಿಷ್ಕ್ರಿಯ ಪಾನ್ ನೊಂದಿಗೆ ಆದಾಯ ತೆರಿಗೆ ರಿಟರ್ನ್ ಅನ್ನು ಸ್ವೀಕರಿಸಲಾಗುವುದಿಲ್ಲ. ಅಲ್ಲದೆ, ಬಾಕಿ ಇರುವ ರಿಟರ್ನ್‍ಗಳನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ. ಬ್ಯಾಂಕ್ ಖಾತೆ ತೆರೆಯುವುದಕ್ಕೂ ಅಡ್ಡಿಯಾಗಲಿದೆ. ಸೆಕ್ಯೂರಿಟಿಗಳಲ್ಲಿ ಹೂಡಿಕೆ ಮಾಡಲು ಪ್ಯಾನ್ ಕಾರ್ಡ್ ಅನ್ನು ಸ್ವೀಕರಿಸಲಾವುದಿಲ್ಲ.