ಕಾಸರಗೋಡು: ಜಿಲ್ಲೆ ಸೇರಿದಂತೆ ಕೇರಳಕ್ಕೆ ಮಾರಕ ಮಾದಕ ದ್ರವ್ಯ ಎಂಡಿಎಂಎ ಪೂರೈಸುತ್ತಿರುವ ಜಾಲದ ಪ್ರಮುಖ ಕೊಂಡಿ ನೈಜೀರಿಯನ್ ಪ್ರಜೆ ಮೋನ್ಸ್‍ಸ್ ಮೊಂಡೆ (37)ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಿ, ಕಾಸರಗೋಡಿಗೆ ಕರೆತಂದಿರುವುದಾಗಿ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಐಭವ್ ಸಕ್ಸೇನಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೇಕಲ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಮಂದಿಯನ್ನು ಎಂಡಿಎಂಎ ಮಾದಕ ದ್ರವ್ಯದೊಂದಿಗೆ ಇತ್ತೀಚೆಗೆ ಬಂಧಿಸಲಾಗಿದ್ದು, ಇವರು ನೀಡಿದ ಮಾಹಿತಿಯನ್ವಯ ಕಾಸರಗೋಡಿಗೆ ಎಂಡಿಎಂಎ ಪೂರೈಸುವ ಜಾಲದ ಪ್ರಮುಖ ಕೊಂಡಿಯಾಗಿರುವ ನೈಜೀರಿಯನ್ ಪ್ರಜೆಯ ಬಗ್ಗೆ ಮಾಹಿತಿ ನೀಡಿದ್ದರು.
ಬೇಕಲ ಡಿವೈಎಸ್ಪಿ ಸಿ.ಕೆ.ಸುನೀಲ್ ಕುಮಾರ್ ಮತ್ತು ಸಿಐ ಯು.ಪಿ.ವಿಪಿನ್ ನೇತೃತ್ವದ ಪೊಲೀಸರ ತಂಡ ಆರೋಪಿಯ ಜಾಡು ಹಿಡಿದು ಬೆಂಗಳೂರಿಗೆ ತೆರಳಿ, ವಿಶೇಷ ಕಾರ್ಯಾಚರಣೆಯೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಮೋನ್ಸಸ್ ಮೋಂಡೆ ಬೆಂಗಳೂರಿನ ಹಲವರಿಗೆ ಡ್ರಗ್ಸ್ ನೀಡುತ್ತಿದ್ದ ಎಂಬ ಮಾಹಿತಿ ಪೆÇಲೀಸರಿಗೆ ಲಭಿಸಿತ್ತು. ಈತನ ವಾಟ್ಸಪ್ ನಂಬರ್ ಆಧಾರವಾಗಿರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿರುವುದಾಗಿ ಡಾ. ವೈಭವ್ ಸಕ್ಸೇನಾ ತಿಳಿಸಿದ್ದಾರೆ.
ಡಾ. ವೈಭವ್ ಸಕ್ಸೇನಾ ಎಸ್‍ಪಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾದಕ ದ್ರವ್ಯ ಸಾಗಾಟ ಮತ್ತು ಪೂರೈಕೆ ತಡೆಗಟ್ಟಲು ವಿಶೇಷ ತಂಡವನ್ನು ರಚಿಸಿದ್ದು, ನಿರಂತರ ಕಾರ್ಯಾಚರಣೆ ಮೂಲಕ ಮಾದಕದ್ರವ್ಯ ಜಾಲದ ತಂಡಕ್ಕೆ ಸಿಂಹ ಸ್ವಪ್ನವಾಗಿದ್ದಾರೆ.