ನವದೆಹಲಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯು ದೇಶದ ಎಲ್ಲ ಭಾಷೆಗಳಿಗೂ ಪ್ರಾಧಾನ್ಯ ನೀಡುವುದರಿಂದ, ಜನರ ನಡುವೆ ವೈಮನಸ್ಸು ಹರಡಲು ಭಾಷೆಯನ್ನು ಬಳಸಿಕೊಳ್ಳುತ್ತಿರುವವರು ತಮ್ಮ 'ದ್ವೇಷದ ಅಂಗಡಿ'ಯನ್ನು ಮುಚ್ಚಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

'ಎನ್‌ಇಪಿ'ಯ ಮೂರನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ 'ಅಖಿಲ ಭಾರತೀಯ ಶಿಕ್ಷಾ ಸಂಗಮ್' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
'ತಮ್ಮ ಸ್ವಾರ್ಥ ಸಾಧನೆಗಾಗಿ ಭಾಷೆಯನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಂಡು ದ್ವೇಷ ಹರಡುವುದರಲ್ಲಿ ನಿರತರಾಗಿರುವವರು ತಮ್ಮ 'ನಫ್ರತ್ ಕಿ ದುಕಾನ್' ಅನ್ನು ಮುಚ್ಚಬೇಕಾಗುತ್ತದೆ' ಎಂದರು.
'ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಪ್ರತಿಭಾವಂತ ಯುವ ಜನತೆಗೆ ನಿಜವಾಗಿಯೂ ನ್ಯಾಯ ಒದಗಿಸಿದಂತಾಗುವುದು. ಸಾಮಾಜಿಕ ನ್ಯಾಯದ ದೃಷ್ಟಿಯಿಂದಲೂ ಇದು ಮಹತ್ವದ ಹೆಜ್ಜೆಯಾಗಲಿದೆ' ಎಂದರು.
ಕೌಶಲಗಳ ಕುರಿತು 12 ಭಾಷೆಗಳಲ್ಲಿ ಅನುವಾದಿತ ಕೃತಿಗಳನ್ನು ಇದೇ ಸಂದರ್ಭದಲ್ಲಿ ಮೋದಿ ಬಿಡುಗಡೆ ಮಾಡಿದರು.