ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಭೌಗೋಳಿಕ ಬದಲಾವಣೆ ತರಲು ಯತ್ನಿಸಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಟೀಕೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರವೀಂದರ್ ರೈನಾ, ಸುಳ್ಳು ಪ್ರಚಾರದ ಮೂಲಕ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಆಡಳಿತವು ವಸತಿರಹಿತರಿಗೆ ವಸತಿ ಒದಗಿಸುವ ನೆಪದಲ್ಲಿ ರಾಜ್ಯಕ್ಕೆ ಕೊಳೆಗೇರಿಗಳು ಮತ್ತು ಬಡತನವನ್ನು ಬರ ಮಾಡಿಕೊಳ್ಳುತ್ತಿದೆ. ಈ ಮೂಲಕ ಕೇಂದ್ರಾಡಳಿತ ಪ್ರದೇಶದಲ್ಲಿ ಭೌಗೋಳಿಕ ಬದಲಾವಣೆ ತರಲು ಪ್ರಯತ್ನಿಸಲಾಗುತ್ತದೆ ಎಂದು ಮುಫ್ತಿ ಆರೋಪಿಸಿದ್ದರು.
'ಮೆಹಬೂಬಾ ಮುಫ್ತಿ ಜನರನ್ನು ಪ್ರಚೋದಿಸುತ್ತಿದ್ದಾರೆ. ಹೊರಗಿನ ಜನರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿ ಮತ್ತು ಮನೆ ನೀಡಲಾಗುವುದು ಎಂದು ಹೇಳುತ್ತಿರುವುದು ಪಿತೂರಿಯಾಗಿದೆ. ಇದು ಕೇವಲ ಪ್ರಚಾರಕ್ಕಾಗಿ ಮಾಡುತ್ತಿದ್ದು, ಮುಫ್ತಿ ನೀಡಿರುವ ಸುಳ್ಳು ಹೇಳಿಕೆಯಾಗಿದೆ' ಎಂದು ರೈನಾ ಹೇಳಿದ್ದಾರೆ.
ಲೆಫ್ಟಿನೆಂಟ್ ಗರ್ವನರ್ ಅವರ ಇತ್ತೀಚಿನ ನಿರ್ಧಾರವು ಬಡ ಮತ್ತು ನಿರಾಶ್ರಿತರಿಗೆ ನೆರವಾಗಿದೆ. ಈ ಮಹತ್ವದ ನಿರ್ಧಾರವು ಪ್ರಸ್ತುತ ಭೂಮಿ ಮತ್ತು ವಸತಿ ಎರಡನ್ನೂ ಹೊಂದಿರದವರಿಗೆ ಅನುಕೂಲ ಮಾಡಿಕೊಡುವುದಾಗಿದೆ ಎಂದು ರೈನಾ ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದ ಭೂರಹಿತ ಮತ್ತು ವಸತಿ ರಹಿತ ಬಡವರಿಗೆ ಭೂಮಿ ಮತ್ತು ವಸತಿ ಒದಗಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಮುಫ್ತಿ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಏನನ್ನೂ ಮಾಡಿಲ್ಲ. ಈಗ ಸುಳ್ಳು ಪ್ರಚಾರದ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ರೈನಾ ಟೀಕಿಸಿದರು.