ಕಾಸರಗೋಡು: ತುಳುನಾಡು ಮತ್ತು ಮಲಬಾರ್ ಪ್ರದೇಶದ ಮಧ್ಯೆ ನೆಲೆಸಿರುವ ಕಾಸರಗೋಡಿನ ಭಾಷಿಕ ಮತ್ತು ಸಾಂಸ್ಕøತಿಕ ವೈವಿಧ್ಯತೆ ಅತ್ಯಂತ ಮಹತ್ವದ್ದಾಗಿದೆ ಎಂದು ಕಣ್ಣೂರು ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೊ. ರವೀಂದ್ರನಾಥ್ ತಿಳಿಸಿದ್ದಾರೆ.
ಕಣ್ಣೂರು ವಿಶ್ವವಿದ್ಯಾಲಯದ ಬಹುಭಾಷಾ ಶಿಕ್ಷಣ ಕೇಂದ್ರ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯದ ಭಾಷಾ ವಿಜ್ಞಾನ ವಿಭಾಗ ವತಿಯಿಂದ ಕಣ್ಣೂರು ವಿವಿಯ ಕಾಸರಗೋಡು ಚಾಲ ಕ್ಯಾಂಪಸ್‍ನಲ್ಲಿ ಮಂಗಳವಾರ ಆರಂಭಗೊಂಡ 'ಕಾಸರಗೋಡು ಒಂದು ಭಾಷಾ ವಲಯ' ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಈ ನಾಡಿನ ಸಾಂಸ್ಕೃತಿಕ, ರಾಜಕೀಯ, ಭಾಷಿಕ ವೈವಿಧ್ಯತೆಯನ್ನು ಅರಿಯಲು, ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಇದು ಉತ್ತಮ ವೇದಿಕೆಯಾಗಿದೆ. ಬಹುಭಾಷಾ ಕಲಿಕಾ ಕೇಂದ್ರದ ಪ್ರಯೋಜನವನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು. ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಎ.ಅಶೋಕನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎನ್.ಎ ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಡಾ.ಎ.ಎಂ.ಶ್ರೀಧರನ್ ಅವರ ತುಳು ಜಾನಪದ ಕಥೆಗಳು (ಸಂಕಲನ) 'ಕದ್ಯನಾಡ' ತುಳುನಾಡಿನಲ್ಲಿ ನಾಗಾರಾಧನೆ (ಅಧ್ಯಯನ) ಕದಿರಿಲೆ ಕೈತ(ತುಳು ಕಾದಂಬರಿ, ಅನುವಾದ) ಕೃತಿಗಳನ್ನು ಶಾಸಕ ಎನ್.ಎ ನೆಲ್ಲಿಕುನ್ನು ಬಿಡುಗಡೆಗೊಳಿಸಿದರು.
ರಾಷ್ಟ್ರಕವಿ ಗೋವಿಂದಪೈ ಸ್ಮಾರಕ ಕಾರ್ಯದರ್ಶಿ ಉಮೇಶ್ ಸಾಲಿಯಾನ್, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್, ಅನುವಾದಕ ಕೆ.ವಿ.ಕುಮಾರನ್, ಕಾಸರಗೋಡು ಸರ್ಕಾರಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸುಜಾತಾ, ಚಾಲಾ ಬಿ.ಎಡ್ ಕೇಂದ್ರದ ಸಹಾಯಕ ನಿರ್ದೇಶಕಿ ಡಾ.ರಿಜುಮೋಲ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ವಿ.ಯದುಕೃಷ್ಣನ್ ಉಪಸ್ಥಿತರಿದ್ದರು.
ಬಹುಭಾಷಾ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎ.ಎಂ.ಶ್ರೀಧರನ್ ಸ್ವಾಗತಿಸಿದರು. ಕ್ಯಾಂಪಸ್ ನಿರ್ದೇಶಕ ಡಾ.ಸಿ.ಸಿ.ಮಣಿಕಂಠನ್ ವಂದಿಸಿದರು. ಜಿಲ್ಲೆಯಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯ ಬಹುಭಾಷಾ ಕಲಿಕಾ ಕೇಂದ್ರ ಆರಂಭವಾದ ಬಳಿಕ ಜಿಲ್ಲೆಯ 20ಕ್ಕೂ ಹೆಚ್ಚು ಭಾಷಾ ವೈವಿಧ್ಯತೆಯನ್ನು ಯಥಾಪ್ರಕಾರ ಉಳಿಸುವ ಪ್ರಯತ್ನ ನಡೆಯುತ್ತಿದೆ. ಹವ್ಯಕ, ಮಲಯಾಳ, ತುಳು ಮತ್ತು ಕನ್ನಡ ಒಳಗೊಂಡ ಚತುರ್ ಭಾಷಾ ನಿಘಂಟು ಒಂದು ವರ್ಷದೊಳಳಗೆ ಹಾಗೂ ಕನ್ನಡ ಜಾನಪದ ಪದ ನಿಘಂಟು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ರಾಷ್ಟ್ರಕವಿ ಗೋವಿಂದಪೈ ಸ್ಮಾರಕ ಮತ್ತು ಬಹುಭಾಷಾ ಸಂಶೋಧನಾ ಕೇಂದ್ರವು ಜಂಟಿಯಾಗಿ ಗೋವಿಂದ ಪೈ ಅವರ 5000ಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ಮಲಯಾಳಂಗೆ ಅನುವಾದಿಸುವ ಕೆಲಸವನ್ನು ಪ್ರಾರಂಭಿಸಿದೆ.
ಈ ಸಂದರ್ಭ ನಡೆದ ವಿವಿಧ ಗೋಷ್ಠಿಗಳಲ್ಲಿ ಭಾಷಾ ಕ್ಷೇತ್ರವಾಗಿ ಕಾಸರಗೋಡು-ಸಂಶೋಧನಾ ಸಾಧ್ಯತೆಗಳು ಎಂಬ ವಿಷಯದಲ್ಲಿ ಡಾ.ಪಿ.ಶ್ರೀಕುಮಾರ್, ಪಾಡ್ದನದ ಭಾಷೆ ಎಂಬ ವಿಷಯದಲ್ಲಿ ಡಾ.ರಾಜೇಶ್ ಬೆಜ್ಜಂಗಳ ಮತ್ತು ತುಳುನಾಡ ರಂಗ ಸಂಪ್ರದಾಯ ವಿಷಯದಲ್ಲಿ ಡಾ.ಪಿ.ಕೆ.ಜಯರಾಜನ್ ವಿಷಯ ಮಂಡಿಸಿದರು. ಜುಲೈ 26ರ ವರೆಗೂ ಕಾರ್ಯಾಗಾರ ಮುಂದುವರಿಯಲಿದೆ.
ಇಂದು ಸಮಾರೋಪ:
26ರಂದು ಮಧ್ಯಾಹ್ನ 3ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕಣ್ಣೂರು ವಿಶವಿದ್ಯಾಲಯದ ಸಹಾಯಕ ಉಪಕುಲಪತಿ ಪೆÇ್ರ.ಎ.ಸಾಬು ಉದ್ಘಾಟಿಸುವರು. ಸಿಂಡಿಕೇಟ್ ಸದಸ್ಯ ಪೆÇ್ರ.ಎಂ.ಸಿ.ರಾಜು ಅಧ್ಯಕ್ಷತೆ ವಹಿಸುವರು. ಕೇಂದ್ರ ವಿಶ್ವವಿದ್ಯಾಲಯದ ಭಾಷಾ ವಿಭಾಗದ ಡೀನ್ ಪೆÇ್ರ.ವಿ.ರಾಜೀವ್, ಮಾಜಿ ಸಿಂಡಿಕೇಟ್ ಸದಸ್ಯ ವಿ.ಪಿ.ಪಿ.ಮುಸ್ತಫಾ, ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.