ಕೊಚ್ಚಿ: ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಹೇಳಿಕೆ ನೀಡದಿರುವುದನ್ನು ಖಂಡಿಸಿ ಕೇರಳದ ಕಾಂಗ್ರೆಸ್ ಶಾಸಕ ಮ್ಯಾಥ್ಯು ಕುಯಲ್‌ನಾಡನ್ 24 ಗಂಟೆಗಳ ಮೌನವ್ರತ ಮತ್ತು ನಿರಶನ ನಡೆಸಿದ್ದಾರೆ.
ಕೊಚ್ಚಿ: ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಹೇಳಿಕೆ ನೀಡದಿರುವುದನ್ನು ಖಂಡಿಸಿ ಕೇರಳದ ಕಾಂಗ್ರೆಸ್ ಶಾಸಕ ಮ್ಯಾಥ್ಯು ಕುಯಲ್‌ನಾಡನ್ 24 ಗಂಟೆಗಳ ಮೌನವ್ರತ ಮತ್ತು ನಿರಶನ ನಡೆಸಿದ್ದಾರೆ.
ತಾವು ಪ್ರತಿನಿಧಿಸುತ್ತಿರುವ ಎರ್ನಾಕುಳಂ ಜಿಲ್ಲೆಯ ಮೂವಾಟ್ಟುಪುಳ ವಿಧಾನಸಭಾ ಕ್ಷೇತ್ರದಲ್ಲಿ ಮ್ಯಾಥ್ಯು ಅವರು ಶನಿವಾರ ಬೆಳಿಗ್ಗೆಯಿಂದ ಮೌನವ್ರತ ಮತ್ತು ನಿರಶನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
'2002ರಲ್ಲಿ ಗುಜರಾತ್‌ನಲ್ಲಿ ಗಲಭೆ ನಡೆದಿದ್ದಾಗ ಮೋದಿ ಅವರು ಇದೇ ರೀತಿ ಮೌನವಾಗಿದ್ದರು. ಈ ಕಾರಣಕ್ಕೆ ಅವರ ವಿರುದ್ಧ ಪ್ರತಿಭಟನೆ ನಡೆಸಲು ಮೌನವನ್ನೇ ಆಯುಧವಾಗಿಸಿದ್ದೇನೆ' ಎಂದು ಮ್ಯಾಥ್ಯು ಅವರು ಮೌನವ್ರತ ಅಂತ್ಯಗೊಳಿಸಿದ ಬಳಿಕ ಭಾನುವಾರ ಹೇಳಿದ್ದಾರೆ.
'ಮೌನವ್ರತ ಆಚರಿಸುವುದು ಸುಲಭವಲ್ಲ. ನಮಗೆ ಏನಾದರೂ ಹೇಳಬೇಕೆಂದಾದರೆ ಮತ್ತು ಅದನ್ನು ಹೇಳಲು ಸಾಧ್ಯವಾಗದಿದ್ದರೆ ಮಾನಸಿಕ ಒತ್ತಡ ಉಂಟಾಗುತ್ತದೆ' ಎಂದೂ ಶಾಸಕರು ವಿವರಿಸಿದ್ದಾರೆ.