ಕಾಸರಗೋಡು: ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಗೆ ಕ್ರಮಕೈಗೊಳ್ಳುವ ಬಗ್ಗೆ ಸಕಾರದ ಗಮನ ಸೆಳೆಯುವುದಾಗಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕ ಎಕೆಎಂ ಅಶ್ರಫ್ ಹಾಗೂ ಎನ್.ಎ ನೆಲ್ಲಿಕುನ್ನು ಭರವಸೆ ನೀಡಿದ್ದಾರೆ.
ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಭಾಷಾ ಅಲ್ಪಸಂಖ್ಯಾತರ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳು ಮಾತನಾಡಿದರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕಾಸರಗೋಡಿನಲ್ಲಿ ಸರ್ಕರಿ ಮುದ್ರಣಾಲಯ ಸ್ಥಾಪನೆ, ಕಲೆಕ್ಟರೇಟ್‍ನಲ್ಲಿ ಕನ್ನಡ ಭಾಷಾಂತರ ವಿಭಾಗ ಆರಂಭಿಸುವುದು ಹಾಗೂ ಜಿಲ್ಲಾ ವಾತ ಮತ್ತು ಮಾಹಿತಿ ಕಛೇರಿಯಲ್ಲಿ ಕನ್ನಡ ಸಹಾಯಕ ಮಾಹಿತಿ ಅಧಿಕಾರಿ ಹುದ್ದೆ ಸೃಷ್ಟಿಸುವುದು ಮುಂತಾದ ಸಮಿತಿಯ ಬೇಡಿಕೆಯನ್ನು ಸರ್ಕಾರದ ಪರಿಶೀಲನೆಗೆ ಕಳುಹಿಸಲಾಗಿದೆ. ಮಂಜೇಶ್ವರಂ, ಕಾಸರಗೋಡು ತಾಲೂಕುಗಳಲ್ಲಿ ಭಾಷಾ ಅಲ್ಪಸಂಖ್ಯಾತರ ಪ್ರದೇಶಗಳಲ್ಲಿರುವ ಸರ್ಕಾರಿ ಕಚೇರಿಗಳ ನಾಮಫಲಕಗಳನ್ನು ಕನ್ನಡದಲ್ಲೂ ಬರೆಯುವಂತೆ ಸೂಚನೆ ನೀಡಲಾಗಿದೆ. ಖಾಲಿ ಇರುವ ಕನ್ನಡ ಬಲ್ಲ ಎಲ್ ಡಿ ಗುಮಾಸ್ತರ ಹುದ್ದೆಗಳ ಕುರಿತು ವರದಿ ನೀಡಲು ಆಯಾ ವಿಭಾಗದ ಅಧಿಕಾರಿಗಳಿಗೆ ಸುಚನೆ ನೀಡಲಾಗಿದೆ. ಸರ್ಕಾರದ ಎಲ್ಲ ಆದೇಶಗಳನ್ನು ಕನ್ನಡದಲ್ಲೂ ಸಿದ್ಧಪಡಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಣದು ತಿಳಿಸಿದರು.
ಕನ್ನಡ ಮತ್ತು ತುಳು ಭಾಷೆ ಅರಿತಿರುವ ಸಿಬ್ಬಂದಿಯನ್ನು ಭಾಷಾ ಅಲ್ಪಸಂಖ್ಯಾತ ಪ್ರದೇಶದ ಕಚೇರಿಗಳಲ್ಲಿ ನೇಮಿಸಬೇಕು ಎಂದು ಪ್ರತಿನಿಧಿಗಳು ಒತ್ತಾಯಿಸಿದರು. ಕೇರಳ ಶಾಲಾ ಕಲೋತ್ಸವದಲ್ಲಿ ಕನ್ನಡ ಕಲಾ ಹಬ್ಬವನ್ನು ಸೇರ್ಪಡೆಗೊಳಿಸಬೇಕು. ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಗಡಿನಾಡ ಕನ್ನಡಿಗ ಪ್ರಮಾಣ ಪತ್ರ ನೀಡಬೇಕು. ಕನ್ನಡ ಮಾಧ್ಯಮದಲ್ಲಿÉೂಂದರಿಂದ ಹತ್ತರ ವರೆಗೆ ಶಿಕ್ಷನ ಪಡೆದ ಶಿಕ್ಷಕರನ್ನು ಮಾತ್ರ ಪಿಎಸ್‍ಸಿ ಮೂಲಕ ಕನ್ನಡ ಅಧ್ಯಾಪಕರನ್ನಾಗಿ ನೇಮಿಸಬೇಕು. ಗ್ರಾಮಾಧಿಕಾರಿ ಮತ್ತು ಪಂಚಾಯಿತಿ ಕಚೇರಿಗಳಿಂದ ವಿವಿಧ ಅರ್ಜಿ ನಮೂನೆಗಳು ಮತ್ತು ರಸೀದಿಗಳನ್ನು ಕನ್ನಡದಲ್ಲಿ ಒದಗಿಸಬೇಕು ಹಾಗೂ ಬದಿಯಡ್ಕದಲ್ಲಿ ಉಪಖಜಾನೆ ಸ್ಥಾಪಿಸುವಂತೆ ಭಾಷಾ ಅಲ್ಪಸಂಖ್ಯಾತರ ಸಮಿತಿ ಸದಸ್ಯರು ಆಗ್ರಹಿಸಿದರು.
ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಎಂ.ಸಾಲಿಯಾನ್, ಜಿಲ್ಲಾ ಕಾನೂನು ಅಧಿಕಾರಿ ಕೆ.ಮುಹಮ್ಮದ್‍ಕುಞÂ, ಪ್ರಭಾರ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಸುರೇಂದ್ರನ್, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಶೀಬಾ ಮುಮ್ತಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ ವಿ.ಎಸ್.ಶಿಮ್ನಾ, ಕಂದಾಯ ಹಿರಿಯ ಗುಮಾಸ್ತ ಅನೂಪ್, ಭಾಷಾ ಅಲ್ಪಸಂಖ್ಯಾತರ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್.ವಿ.ಭಟ್, ವಕೀಲ ಕೆ.ಎಂ.ಎಂ.ಬಳ್ಳಕ್ಕುರಾಯ, ಶ್ರೀನಿವಾಸ ರಾವ್, ಸ್ಟೀಫನ್ ಕ್ರಾಸ್ತಾ, ಬಾಬು ಮಾಸ್ಟರ್ ಉಪಸ್ಥಿತರಿದ್ದರು.