ಕಾಸರಗೋಡು: ಪನತ್ತಡಿ ಪಂಚಾಯಿತಿಯ ಬಳಾಂತೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಪಂಚಾಯಿತಿ ಕುಟುಂಬಶ್ರೀ ಸಿಡಿಎಸ್ ಮತ್ತು ಜಿಆರ್‍ಸಿ ವತಿಯಿಂದ ಬಳಾಂತೋಡ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹಲಸಿನ ಹಬ್ಬ ಆಚರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಸನ್ನ ಪ್ರಸಾದ್ ಉದ್ಘಾಟಿಸಿದರು. ಪ್ಲಾಟಿನಂ ಜುಬಿಲಿ ಆಚರಣಾ ಸಮಿತಿ ಅಧ್ಯಕ್ಷ ಎಂ.ವಿ.ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ. ಎಂ.ಕುರಿಯಾಕೋಸ್, ಸುಪ್ರಿಯಾ ಶಿವ ದಾಸ್, ಸ್ಥಾಯಿ ಸಮಿತಿ ಸದಸ್ಯೆ ಲತಾ ಅರವಿಂದನ್ ವಾರ್ಡ್ ಸದಸ್ಯರಾದ ಕೆ. ಕೆ.ವೇಣುಗೋಪಾಲ್, ಎನ್. ವಿನ್ಸೆಂಟ್, ರಾಧಾ ಸುಕುಮಾರನ್, ಸಜಿನಿ ಮೋಲ್,ಪ್ರಿನ್ಸಿಪಾಲ್. ಎಂ. ಗೋವಿಂದನ್, ಪ್ರಭಾರಿ ಮುಖ್ಯ ಶಿಕ್ಷಕಿ ರಿನಿ ಟೀಚರ್, ಸಿಡಿಎಸ್ ಅಧ್ಯಕ್ಷೆ ಆರ್.ಸಿ.ರಜನಿದೇವಿ, ಪಿ.ಟಿ.ಎ ಉಪಾಧ್ಯಕ್ಷ ರಂಜಿತ್, ಮದರ್ ಪಿ.ಟಿ.ಎ ಅಧ್ಯಕ್ಷೆ ಜಯಶ್ರೀ ದಿನೇಶ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ನರ್ಸರಿ, ಎಲ್.ಪಿ, ಯು.ಪಿ ವಿಭಾಗ ಮಕ್ಕಳು, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿ ಪೊಲೀಸ್(ಎಸ್‍ಪಿಸಿ) ಮತ್ತು ಜೆಆರ್‍ಸಿ ನೇತೃತ್ವದಲ್ಲಿ ವಿವಿಧ ಸೊಪ್ಪುಗಳಿಂದ ತಯಾರಿಸಿದ ಭಕ್ಷ್ಯ ಉತ್ಪನ್ನ ಪ್ರಮುಖ ಆಕರ್ಷಣೆಯಾಯಿತು. ಹಲಸಿನ ವಿವಿಧ ಖಾದ್ಯಗಳ ಪ್ರದಸ್ನ ಮತ್ತು ಮಾರಾಟ ನಡೆಯಿತು. ಪನತ್ತಡಿ ಗ್ರಾಮ ಪಂಚಾಯಿತಿಯ ಎಲ್ಲ 15 ವಾರ್ಡ್‍ಗಳ ವತಿಯಿಂದ ಮಳಿಗೆಗಳನ್ನು ಏರ್ಪಡಿಸಲಾಗಿತ್ತು. ಶಾಲಾ ಪಿಟಿಎ ಅಧ್ಯಕ್ಷ ಕೆ.ಎನ್.ವೇಣು ಸ್ವಾಗತಿಸಿ, ಕಾರ್ಯಕ್ರಮ ಸಮಿತಿ ಸಂಚಾಲಕ ಬಿಜು ಮಲ್ಲಪಲ್ಲಿ ವಂದಿಸಿದರು.