ಕಾಸರಗೋಡು: ಸಿ.ಪಿ.ಸಿ.ಆರ್.ಐ.ಯಲ್ಲಿ ಈಶಾನ್ಯ ವಲಯದ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳಿಗೆ ಐದು ದಿನಗಳ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಐಸಿಎಆರ್- ಸಿಪಿಸಿಆರ್ ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ತೆಂಗು, ಅಡಕೆ, ಕೋಕೋ ವೈಜ್ಞಾನಿಕ ಕೃಷಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದರು.
ತೆಂಗು ಅಭಿವೃದ್ಧಿ ಮಂಡಳಿ ಮುಖ್ಯಾಧಿಕಾರಿ ಡಾ. ಹನುಮಂತ ಗೌಡ ಮುಖ್ಯ ಅತಿಥಿಯಾಗಿದ್ದರು. ಕ್ಯಾಂಮ್ಕೋ ಎಂಡಿ ಕೃಷ್ಣಕುಮಾರ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ.ಮುರಳೀಧರನ್, ಬೆಳೆ ಸಂರಕ್ಷಣಾ ವಿಭಾಗದ ಮುಖ್ಯಸ್ಥ ಡಾ.ವಿನಾಯಕ ಹೆಗ್ಡ್ಗೆ, ಡಾ. ಮುರಳಿಗೋಪಾಲ್ ಮತ್ತಿತರರು ಮಾತನಾಡಿದರು. ಕೃಷಿ ಇಲಾಖೆ ಅಧಿಕಾರಿಗಳು, ಸಿಪಿಸಿಆರ್‍ಐ ವಿಜ್ಞಾನಿಗಳು, ಈಶಾನ್ಯ ಪ್ರದೇಶದ ಅಧಿಕಾರಿಗಳು, ರೈತರು ಮುಂತಾದವರು ಭಾಗವಹಿಸಿದ್ದರು.