ಕಾಸರಗೋಡು: ಜಿಲ್ಲಾ ರಿಜಿಸ್ಟ್ರಾರ್ ಜನರಲ್, ಮಲಪ್ಪುರಂ ಜಿಲ್ಲೆಯ ಕೋಟ್ಟಕ್ಕಲ್ ನಿವಾಸಿ, ಮಹಮ್ಮದ್ ಅಶ್ರಫ್ ಟಿ.ಇ(53)ಅವರ ಮೃತದೇಹ ಅವರು ವಾಸ್ತವ್ಯ ಹೂಡಿದ್ದ ನುಳ್ಳಿಪ್ಪಾಡಿಯ ವಸತಿಗೃಹದಲ್ಲಿ ಪತ್ತೆಯಾಗಿದೆ.
ಕಳೆದ ಒಂದುವರೆ ವರ್ಷದಿಂದ ಕಾಸರಗೋಡು ಜಿಲ್ಲಾ ರಿಜಿಸ್ಟ್ರಾರ್ ಜನರಲ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು ವಿವಿಧ ವಸತಿಗೃಹದಲ್ಲಿ ವಾಸ್ತವ್ಯದಲ್ಲಿದ್ದರು. ಮೂರು ದಿವಸಗಳ ಹಿಂದೆ ನುಳ್ಳಿಪ್ಪಾಡಿಯ ವಸತಿಗೃಹದಲ್ಲಿ ತಂಗಿದ್ದರು. ತುರ್ತು ಕೆಲಸವಿರುವುದರಿಂದ ಸೋಮವಾರ ಬೆಳಗ್ಗೆ ಬೇಗನೆ ಎಬ್ಬಿಸುವಂತೆ ವಸತಿಗೃಹದ ಸಿಬ್ಬಂದಿಗೆ ತಿಳಿಸಿ ಭಾನುವಾರ ರಆತ್ರಿ ತಮ್ಮ ಕೊಠಡಿಗೆ ತೆರಳಿದ್ದರು. ಬೆಳಗ್ಗೆ ಸಿಬ್ಬಂದಿ ಮೊಬೈಲ್‍ಗೆ ಕರೆಮಾಡಿದರೂ, ಸ್ವೀಕರಿಸದಿದ್ದಾಗ ಕೊಠಡಿಗೆ ತೆರಳಿ ನೋಡಿದಾಗ ಬಾಗಿಲು ತೆರೆದ ಸಥಿತಿಯಲ್ಲಿದ್ದರೆ, ಮಹಮ್ಮದ್‍ಅಶ್ರಫ್ ಸ್ನಾನಗೃಹದಲ್ಲಿ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.