ಕಾಸರಗೋಡು: ಹಲವು ವರ್ಷಗಳಿಂದ ವೇತನವಿಲ್ಲದೆ ಸಾವಿರಾರು ಶಿಕ್ಷಕರು ಸಂಕಷ್ಟ ಅನುಭವಿಸುತ್ತಿದ್ದರೆ, ಶಿಕ್ಷಣ ಕ್ಷೇತ್ರದ ಮೂಲಕ ಕಮಿಷನ್ ಗಳಿಕೆ ಲೆಕ್ಕಾಚಾರದಲ್ಲಿ ಸರ್ಕಾರ ತೊಡಗಿಸಿಕೊಂಡಿದ್ದು, ಶಿಕ್ಷಕರ ಅಹವಾಲು ಸವೀಕರಿಸಲು ಮುಂದಾಗದ ಸರ್ಕಾರದ ಧೋರಣೆ ಖಂಡನೀಯ ಎಂದು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
ಅವರು ಕೆಪಿಎಸ್‍ಟಿಎ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನೇಮಕಾತಿ ಅಂಗೀಕಾರ ಲಭಿಸದ ಶಿಕ್ಷಕರಿಂದ ಕಾಞಂಗಾಡ್ ಡಿಇಒ ಕಚೇರಿ ಎದುರು ನಡೆದ ಒಂದು ದಿನದ ಉಪವಾಸ ಸತ್ಯಾಗ್ರಹ ಉದ್ಘಾಟಿಸಿ ಮಾತನಾಡಿದರು. ವರ್ಷಗಳಿಂದ ವೇತನವಿಲ್ಲದೆ ದುಡಿಯುತ್ತಿರುವ ಶಿಕ್ಷಕರ ನೇಮಕಾತಿ ಕಾಯಂಗೊಳಿಸಬೇಕು, ಶಿಕ್ಷಕರಿಗೆ ವೇತನ ಶ್ರೇಣಿ ಮತ್ತು ಸವಲತ್ತು ಒದಗಿಸಿಕೊಡಬೇಕು ಮುಂತಾದ ಬೇಡಿಕೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಪ್ರಶಾಂತ ಕಾನತ್ತೂರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಜಿ.ಕೆ.ಗಿರಿಜಾ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ.ಶಶಿಧರನ್, ಎ.ವಿ.ಗಿರೀಶನ್, ಜಿಲ್ಲಾ ಕಾರ್ಯದರ್ಶಿ ಕೆ.ಶ್ರೀನಿವಾಸನ್, ಎನ್.ಜಿ.ಓ. ಸಂಘದ ಜಿಲ್ಲಾಧ್ಯಕ್ಷ ಎ.ಟಿ.ಶಶಿ ಸೇವಾ ಪಿಂಚಣಿದಾರರ ಸಂಘದ ಜಿಲ್ಲಾಧ್ಯಕ್ಷ ಪಿ.ಸಿ.ಸುರೇಂದ್ರನ್ ನಾಯರ್, ಅಶೋಕನ್ ಕೋಡೋತ್, ಪಿ.ಟಿ.ಬೆನ್ನಿ, ಕುಞÂಕಣ್ಣನ್ ಕಾರಟೇರಿ ಕೆ. ಶೋಭನಾ, ಕೆ.ವಿ.ವಾಸುದೇವನ್ ನಂಬೂದಿರಿ, ಸಿ.ಎಂ.ವರ್ಗೀಸ್, ಟಿ.ರಾಜೇಶ್ ಕುಮಾರ್, ಪಿ.ಚಂದ್ರಮತಿ, ಜೋಮಿ ಟಿ.ಜೋಸ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭವನ್ನು ರಾಜ್ಯ ಉಪಾಧ್ಯಕ್ಷ ಕೆ.ರಮೇಶನ್ ಉದ್ಘಾಟಿಸಿದರು.