ತ್ರಿಶೂರ್: ಲೋಕಪ್ರಸಿದ್ದ ಶ್ರೀವಡಕ್ಕುನಾಥ ದೇವಸ್ಥಾನದಲ್ಲಿ ಅಷ್ಟದ್ರವ್ಯ ಮಹಾಗಣಪತಿ ಹೋಮಕ್ಕೆ ಸಿದ್ಧತೆ ಆರಂಭವಾಗಿದೆ. ಸಮಾರಂಭಗಳು ಜುಲೈ 17 ರಂದು (ಕರ್ಕಾಟಕ 1) ರಂದು ಆರಂಭಗೊಳ್ಳಲಿದೆ.
ನಿರಂತರವಾಗಿ 41ನೇ ವರ್ಷದ ವಡಕುನಾಥನ ಆನೆಯೂಟವೂ ಈ ಸಂದರ್ಭ ನಡೆಯಲಿದೆ. ಈ ವರ್ಷ ಸುಮಾರು 70 ಆನೆಗಳು ಭಾಗವಹಿಸಲಿವೆ. ಕೇರಳದ ಎಲ್ಲಾ ಭಾಗಗಳಿಂದ ಆನೆಗಳು ಭಾಗವಹಿಸಲಿವೆ.
ಕೇರಳದ ಮೊದಲ ಆನೆ ಭೋಜನ ವಡಕ್ಕುನಾಥ ದೇವಸ್ಥಾನದಲ್ಲಿ ಪ್ರಾರಂಭಿಸಲಾಯಿತು. ಆ ಕಾಲದ ಯುವ ಸಂಘಟನೆಯಾದ ಯುವಜನ ಕ್ರಿಯಾ ಸಮಿತಿಯಿಂದ ಭೋಜನ ಪ್ರಾರಂಭವಾಯಿತು. 10,008 ತೆಂಗಿನಕಾಯಿ, 2000 ಕೆಜಿ ಬೆಲ್ಲ, 1500 ಕೆಜಿ ಅವಲಕ್ಕಿ, 250 ಕೆಜಿ ಹೊದಳು, 100 ಕೆಜಿ ಎಳ್ಳು, 75 ಕೆಜಿ ಜೇನುತುಪ್ಪ, ಕಬ್ಬು, ಗಣಪತಿ ಸುಣ್ಣ ಇತ್ಯಾದಿಗಳನ್ನು ಅಷ್ಟದ್ರವ್ಯಗಳಾಗಿ ಬಳಸಲಾಗುತ್ತದೆ. ದೇವಸ್ಥಾನದ ತಂತ್ರಿ ಪುಲಿಯನ್ನೂರು ಶಂಕರನಾರಾಯಣನ್ ನಂಬೂದಿರಿ ನೇತೃತ್ವದಲ್ಲಿ ಮಹಾಗಣಪತಿ ಹೋಮ ನಡೆಯಲಿದೆ. ಸುಮಾರು 50 ಗಣ್ಯರು ಉಪಸ್ಥಿತರಿರುವರು.
ಬೆಳಗ್ಗೆ 9.30ಕ್ಕೆ ಗಜಪೂಜೆ ಆರಂಭವಾಗಲಿದೆ. ದೇವಸ್ಥಾನದ ಮೇಲ್ಶಾಂತಿ ಅಣಿಮಂಗಲಂ ರಾಮನ್ ನಂಬೂದಿರಿ ಅವರು ಆನೆಗೆ ಮೊದಲ ನೈವೇದ್ಯ ನೀಡುವ ಮೂಲಕ ಉದ್ಘಾಟಿಸುವರು. ಆನೆ ಭೋಜನಕ್ಕೆ 1 ಕೋಟಿ ರೂಪಾಯಿ ವಿಮೆ ಮಾಡಿಸಲಾಗಿದೆ. ದೇವಸ್ಥಾನದ ಸಲಹಾ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಂದು ಅನ್ನದಾನ ಮಂಟಪದಲ್ಲಿ 7000 ಜನರಿಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕೂತಂಬಲದಲ್ಲಿ ವಿಶೇಷ ಭಗವತ್ ಸೇವೆ ನಡೆಯಲಿದೆ.