ಕಾಸರಗೋಡು: ನೀಲೇಶ್ವರ ನಗರಸಭಾ ವಾರ್ಷಿಕ ಯೋಜನೆಯ ಅಂಗವಾಗಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು. ನಗರಸಭಾ ಅಧ್ಯಕ್ಷೆ ಟಿ.ವಿ.ಶಾಂತಾ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಒಟ್ಟು 27 ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು. ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ರವೀಂದ್ರನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಿ.ಗೌರಿ, ನಗರಸಭಾ ಸದಸ್ಯರಾದ ಕೆ.ಮೋಹನನ್, ಶಂಸುದ್ದೀನ್ ಅರಿಂಚಿರ, ಕೆ.ಜಯಶ್ರೀ, ಎಂ.ಕೆ.ವಿನಯರಾಜ್, ಟಿ.ವಿ.ಶೀಬಾ, ನಗರಸಭಾ ಕಾರ್ಯದರ್ಶಿ ಕೆ.ಮನೋಜ್ ಕುಮಾರ್ ಉಪಸ್ಥೀತರಿದ್ದರು. ಪುರಸಭಾ ಸದಸ್ಯ ಪಿ.ಸುಭಾಷ್ ಸ್ವಾಗತಿಸಿದರು. ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಪಿ.ವಿ.ಸತೀಶ್ ಕುಮಾರ್ ವಂದಿಸಿದರು.